ಬೆಂಗಳೂರು: ಇಂದು ನೂತನ 2026-27ನೇ ಶೈಕ್ಷಣಿಕ ವರ್ಷದ ಶಾಲೆಗಳು ಆರಂಭ. ಅತ್ತ, ಇಷ್ಟು ದಿನ ಬೇಸಿಗೆಯ ರಜಾ-ಮಜಾ ಕಳೆದು ಮತ್ತೆ ಶಾಲೆಗೆ ಮರಳುವ ವಿದ್ಯಾರ್ಥಿಗಳನ್ನು ಖುಷಿಯಿಂದಲೇ ಸ್ವಾಗತಿಸಲು ಇತ್ತ ಶಿಕ್ಷಕ ವೃಂದ ನಾನಾ ರೀತಿಯ ತಯಾರಿ ಮಾಡಿಕೊಂಡಂತೆ ಕಂಡು ಬಂತು. ಅತ್ತ, ಸ್ಕೂಲ್ ಬ್ಯಾಗ್ ಗಳನ್ನು ಹುಡುಕಿಕೊಂಡು ಮತ್ತೆ ಶಾಲೆಯತ್ತ ಮುಖ ಮಾಡಿದ ವಿದ್ಯಾರ್ಥಿಗಳಿಗೆ ಕೆಲ ಶಾಲೆಗಳಲ್ಲಿ ಹೂವು ಕೊಟ್ಟು, ಆರತಿ ಬೆಳಗಿ ಸ್ವಾಗತಿಸಿದರೆ, ಮತ್ತೆ ಕೆಲ ಶಾಲೆಗಳಲ್ಲಿ ಮಕ್ಕಳಿಗೆ ಪ್ರಿಯವೆನ್ನಿಸಿದ ಚಾಕೊಲೇಟ್ ಗಳನ್ನು ನೀಡಿ ಸ್ವಾಗತಿಸಲಾಯಿತು.
ಶಿಕ್ಷಕರಾದವರು ಯಾವಾಗಲೂ ಮಕ್ಕಳೊಂದಿಗೆ ಮಕ್ಕಳಾಗಿ ಬರೆತುಕೊಂಡು ಪಾಠ ಮಾಡಬೇಕು. ಅಂದಾಗ ಮಾತ್ರ ಅದೆಲ್ಲವೂ ಮಕ್ಕಳ ತಲೆಗೆ ಹತ್ತುತ್ತೆ ಅನ್ನೋ ಮಾತಿಗೆ ಪುಷ್ಟಿ ಎಂಬಂತೆ ಈ ಸರ್ಕಾರಿ ಶಾಲೆಯಲ್ಲಿ (ಶಾಲೆಯ ಬೋರ್ಡ್ ತೋರಿಸಬೇಕು) ಶಿಕ್ಷಕರು ಶಾಲಾ ಆರಂಭದ ಮೊದಲ ದಿನವೇ ನಾಲ್ಕು ಗೋಡೆಗಳಿಂದ ಹೊರ ಬಂದ ಶಾಲಾ ಆವರಣದಲ್ಲೇ ಮಕ್ಕಳೊಂದಿಗೆ ನೃತ್ಯ ಮಾಡುತ್ತ ಪಾಠ ಮಾಡಿದ್ದುದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಕರೆತಂದ ಪೋಷಕರನ್ನು ಮಾತನಾಡಿಸಿದಾಗ ಅವರು ಹೇಳಿದ್ದು ಇಷ್ಟು. ಶಾಲಾ ರಜೆಯನ್ನು ಕಳೆದು ಬೇರೆ ಬೇರೆ ಊರುಗಳಿಂದ ಮರಳಿ ಮತ್ತೆ ಬೆಂಗಳೂರಿಗೆ ಬಂದಿರುವ ಮಕ್ಕಳ ಸಂಖ್ಯೆ ಇಂದು ಕೊಂಚ ಕಡಿಮೆ ಇದ್ದರೂ ಮಕ್ಕಳಲ್ಲಿನ ಉತ್ಸಾಹ ಮಾತ್ರ ಕಡಿಮೆ ಇರಲಿಲ್ಲ.
PublicNext
02/06/2026 07:51 pm
LOADING...