ನವದೆಹಲಿ: ಕೇಂದ್ರ ಸರ್ಕಾರವು ಇಂದು ಮಹತ್ವದ ಆದೇಶ ಹೊರಡಿಸಿದ್ದು, ಹಿರಿಯ IAS ಅಧಿಕಾರಿ ಲೋಖಂಡೆ ಪ್ರಶಾಂತ್ ಸೀತಾರಾಮ್‌ರನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (CBSE) ಹೊಸ ಅಧ್ಯಕ್ಷರನ್ನಾಗಿ ನೇಮಿಸಿದೆ. 2001ರ ಬ್ಯಾಚ್‌ನ AGMUT ಕೇಡರ್ IAS ಅಧಿಕಾರಿಯಾಗಿರುವ ಸೀತಾರಾಮ್, ಈ ಹಿಂದೆ ಗೃಹ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಹಾಲಿ ಅಧ್ಯಕ್ಷರಾಗಿದ್ದ ರಾಹುಲ್ ಸಿಂಗ್‌ರನ್ನು ಕೃಷಿ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದ್ದು, ಇದೇ ವೇಳೆ CBSE ಕಾರ್ಯದರ್ಶಿ ಹಿಮಾಂಶು ಗುಪ್ತಾ ಅವರನ್ನೂ ವರ್ಗಾವಣೆ ಮಾಡಲಾಗಿದೆ.
PublicNext
02/06/2026 10:37 pm
LOADING...