ಉಡುಪಿ: ಕೊಂಕಣ ರೈಲು ಮಾರ್ಗದಲ್ಲಿ ಅನಧಿಕೃತ ಮಾರಾಟ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೊಂಕಣ ರೈಲ್ವೇ ವಾಣಿಜ್ಯ ವಿಭಾಗ ಹಾಗೂ ರೈಲ್ವೇ ರಕ್ಷಣ ಪಡೆ ಸಂಯುಕ್ತವಾಗಿ 15 ದಿನಗಳ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ.
ಈ ಅವಧಿಯಲ್ಲಿ ರೈಲು ನಿಲ್ದಾಣಗಳು ಹಾಗೂ ರೈಲುಗಳ ಒಳಭಾಗದಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತಿದೆ. ಮೇ 31ರಂದು ಮಡ್‌ಗಾಂವ್-ಮುಂಬಯಿ ಸಿಎಎಂಟಿ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಹಾಳಾದ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ ಅನಧಿಕೃತ ವ್ಯಕ್ತಿಯ ವಿರುದ್ಧ ದೂರು ಬಂದ ತತ್‌ಕ್ಷಣವೇ ಕ್ರಮ ತೆಗೆದುಕೊಳ್ಳಲಾಗಿದೆ. ಈ ರೈಲಿನಲ್ಲಿ ಆಹಾರ ಪೂರೈಕೆ ಸೇವೆಯನ್ನು ಐಆರ್‌ಸಿಟಿಸಿ ನಿರ್ವಹಿಸುತ್ತಿದ್ದು, ಪರಿಶೀಲನೆ ವೇಳೆ ವ್ಯಕ್ತಿಯು ಯಾವುದೇ ಪರವಾನಗಿ ಅಥವಾ ಗುರುತಿನ ಚೀಟಿ ಇಲ್ಲದೆ ಪ್ರಯಾಣಿಕರಿಗೆ ಹಣ್ಣುಗಳನ್ನು ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಅಲ್ಲದೆ ಮಾರಾಟ ಮಾಡುತ್ತಿದ್ದ ಹಣ್ಣುಗಳ ಗುಣಮಟ್ಟವೂ ಕಳಪೆಯಾಗಿರುವುದು ಕಂಡುಬಂದಿದೆ. ರೈಲ್ವೇ ನಿಯಮಾನುಸಾರ ಆತನಿಗೆ ದಂಡ ವಿಧಿಸಲಾಗಿದ್ದು, ಬಳಿಕ ಹೆಚ್ಚಿನ ಕ್ರಮಕ್ಕಾಗಿ ರತ್ನಗಿರಿ ರೈಲ್ವೇ ರಕ್ಷಣ ಪಡೆಯ ವಶಕ್ಕೆ ನೀಡಲಾಗಿದೆ.
PublicNext
03/06/2026 10:28 am
LOADING...