ಮಂಗಳೂರು: ಬಂಗ್ರ ಕೂಳೂರು ವಾರ್ಡ್‌ನ ಎ.ಜೆ. ಇಂಜಿನಿಯರಿಂಗ್ ಕಾಲೇಜು ರಸ್ತೆಯ ಬಳಿ ರಾಜಕಾಲುವೆ ಮಂಗಳವಾರ ಸಂಜೆ ಸುರಿದ ಮಳೆಗೆ ಮತ್ತೆ ಕುಸಿದಿದೆ.
ಸಂಜೆಯಿಂದ ಮಂಗಳೂರಿನಲ್ಲಿ ಮಳೆ ಸುರಿಯಲಾರಂಭಿಸಿದ್ದು, ಸಂಜೆ 5.30ಸುಮಾರಿಗೆ ಕಾಲುವೆ ಕುಸಿತ ಕಂಡಿದೆ. ತಕ್ಷಣ ಮಾಜಿ ಕಾರ್ಪೊರೇಟರ್ ಕಿರಣ್ ಕುಮಾರ್, ಮನಪಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕುಸಿತಗೊಂಡ ಭಾಗ ಮತ್ತೆ ಕುಸಿಯದಂತೆ ತಾತ್ಕಾಲಿಕ ಪರಿಹಾರಕ್ಕೆ ನಾಳೆ ಸ್ಯಾಂಡ್ ಬ್ಯಾಗ್ ಅಳವಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2024ರಲ್ಲಿ ಈ ರಾಜಕಾಲುವೆ ಕುಸಿತಗೊಂಡಿತ್ತು. ತಾತ್ಕಾಲಿಕ ಪರಿಹಾರವಾಗಿ ಆಗಲೂ ಸ್ಯಾಂಡ್ ಬ್ಯಾಗ್ ಹಾಕಲಾಗಿತ್ತು. ಬಳಿಕ ಮಹಾನಗರಪಾಲಿಕೆಯು ರಾಜಕಾಲುವೆ ಕುಸಿಯದಂತೆ 1.30ಲಕ್ಷ ರೂ. ಮೊತ್ತದಲ್ಲಿ ತಡೆಗೋಡೆ ನಿರ್ಮಿಸಲು ನಿರ್ಮಿತಿ ಕೇಂದ್ರಕ್ಕೆ ವಹಿಸಿತ್ತು. ಆದರೆ ಈವರೆಗೆ ಕಾಮಗಾರಿ ನಡೆಯದ ಪರಿಣಾಮ ಇದೀಗ ರಾಜಕಾಲುವೆ ಮತ್ತೆ ಕುಸಿತ ಕಂಡಿದೆ.
PublicNext
03/06/2026 07:25 am
LOADING...