ಮುಲ್ಕಿ: ರೈಲ್ವೇ ನಿಲ್ದಾಣದಲ್ಲಿ ನೂತನ ಎರಡನೇ ಪ್ಲಾಟ್ಫಾರ್ಮ್ ನಿರ್ಮಾಣವಾಗುತ್ತಿದ್ದಂತೆ
ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮುಲ್ಕಿ ರೈಲ್ವೇ ನಿಲ್ದಾಣ ರಸ್ತೆಗೆ ಡಾಂಬರೀಕರಣ ಕೂಡ ನಡೆದಿದ್ದು ಪ್ರಯಾಣಿಕರ ಬಹು ದಿನಗಳ ಕನಸು ನನಸಾಗಿದೆ.
ಮುಲ್ಕಿ ರೈಲ್ವೇ ನಿಲ್ದಾಣಕ್ಕೆ ದಿನಕ್ಕೆ ಸಾವಿರಾರು ಮಂದಿ ಪ್ರಯಾಣಿಕರು ಮುಂಬೈ, ಕೇರಳ ಸಹಿತ ಅನೇಕ ಕಡೆಗಳಿಂದ ಬರುತ್ತಿದ್ದು ಹಾಗೆಯೇ ಮುಲ್ಕಿ, ಮೂಡಬಿದ್ರೆ ಕಾರ್ಕಳ, ಕಿನ್ನಿಗೋಳಿ, ಫಲಿಮಾರು ಕಡೆಯಿಂದ ಅನೇಕ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ.
ಮುಲ್ಕಿ ರೈಲ್ವೇ ನಿಲ್ದಾಣ ರಸ್ತೆ ಅವ್ಯವಸ್ಥೆಯಿಂದ ಪ್ರಯಾಣಿಕರು ಸಂಬಂಧಪಟ್ಟ ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದು ಈ ಬಗ್ಗೆ ಅನೇಕ ಬಾರಿ ಸ್ಥಳೀಯ ಸಂಸದರು ಹಾಗೂ ಶಾಸಕರಿಗೆ ಪ್ರಯಾಣಿಕರು ಹಾಗೂ ಮುಲ್ಕಿ ನಾಗರಿಕರ ಸಮಿತಿ ವತಿಯಿಂದ ಮನವಿ ಕೂಡ ಸಲ್ಲಿಸಲಾಗಿತ್ತು.
ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ಟೆಂಡರ್ ಕೂಡ ಕರೆಯಲಾಗಿದ್ದು ಕಡಿಮೆ ಹಣಕ್ಕೆ ಯಾವ ಗುತ್ತಿಗೆದಾರನು ಡಾಂಬರೀಕರಣ ನಡೆಸಲು ಮುಂದೆ ಬಾರದೆ ರಸ್ತೆ ಹೊಂಡ ಗುಂಡಿಗಳಿಂದ ಪ್ರಯಾಣಕ್ಕೆ ದುಸ್ತರವಾಗಿ ಪರಿಣಮಿಸಿತ್ತು ಹಾಗೂ ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ನಲ್ಲಿ ಕೂಡ ವರದಿ ಪ್ರಕಟವಾಗಿತ್ತು.
ಕೊನೆಗೂ ರೈಲ್ವೇ ಇಲಾಖೆಯ ಒತ್ತಾಯಕ್ಕೆ ಮಣಿದು ಕಾರ್ಕಳ ಮೂಲದ ಗುತ್ತಿಗೆದಾರರು ಸುಮಾರು 14 ಲಕ್ಷ ವೆಚ್ಚದಲ್ಲಿ 400 ಮೀ. ರಸ್ತೆ ಕಾಮಗಾರಿ ನಡೆದಿದೆ
ಸಾಮಾಜಿಕ ಕಾರ್ಯಕರ್ತ ಶರತ್ ಕಾರ್ನಾಡ್ ಮಾತನಾಡಿ
ನೂತನ ಡಾಂಬರೀಕರಣಗೊಂಡ ರಸ್ತೆಯ ಇಕ್ಕೆಲಗಳಲ್ಲಿ ಸುಸಜ್ಜಿತ ಚರಂಡಿ ನಿರ್ಮಾಣ ಮಾಡಿ ಮಳೆ ನೀರು ಹರಿದು ಹೋಗಲು ಅನುವು ಮಾಡಿಕೊಡಬೇಕು , ರೈಲ್ವೇ ನಿಲ್ದಾಣ ಸಂಪರ್ಕ ರಸ್ತೆ ರೈಲ್ವೇ ಇಲಾಖೆ, ಕಿಲ್ಪಾಡಿ, ಪಡು ಪಣಂಬೂರು, ಮುಲ್ಕಿ ನಗರ ಪಂಚಾಯಿತಿಗೆ ಹಂಚಿ ಹೋಗಿದ್ದು ಕೆಂಚನಕೆರೆ- ಕೆಎಸ್ ರಾವ್ ನಗರ ಬಳಿಯಿಂದ ಬರುವ ರಸ್ತೆ ಹೊಂಡಮಯವಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಅದರಲ್ಲೂ ರೈಲ್ವೇ ಇಲಾಖೆಯ ಮೇಲ್ಸೇತುವೆ ಬಳಿ ಕಾಂಕ್ರೀಟ್ ರಸ್ತೆಯಲ್ಲಿ ನೀರು ನಿಲ್ಲುತ್ತಿದ್ದು ಕೆಸರುಮಯವಾಗಿ ಸಂಚಾರ ದುಸ್ತರವಾಗಿ ಪರಿಣಮಿಸಿದೆ.
ರೈಲ್ವೇ ನಿಲ್ದಾಣದ ರಸ್ತೆಯಲ್ಲಿ ರಾತ್ರಿ ಹೊತ್ತು ಗಾಂಜಾ ಸಹಿತ ಅನೇಕ ಅಕ್ರಮ ದಂಧೆ ನಡೆಯುತ್ತಿದೆ ಹಾಗೂ ಈ ಭಾಗದಲ್ಲಿ ಎಲ್ಲೆಂದರಲ್ಲಿ ದುಷ್ಕರ್ಮಿಗಳು ತ್ಯಾಜ್ಯ ಬಿಸಾಡುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಪೊಲೀಸ್ ಇಲಾಖೆಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ರಾತ್ರಿ ಹೊತ್ತು ರೈಲ್ವೇ ಹಾಗೂ ಮುಲ್ಕಿ ಪೊಲೀಸರು ಪೊಲೀಸ್ ಬೀಟ್ ಬಲಪಡಿಸಿ ದುಷ್ಕರ್ಮಿಗಳನ್ನು ಮಟ್ಟ ಹಾಕಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.
ಪುನೀತ ಕೃಷ್ಣ ಮುಲ್ಕಿ
PublicNext
03/06/2026 04:17 pm