ಬ್ರಹ್ಮಾವರ: ಕೃಷಿಕರು ಸೇರಿದಂತೆ ಬಹುತೇಕ ಮಾನವ ಶ್ರಮಕ್ಕೆ ಪರ್ಯಾಯವಾಗಿ ಯಾಂತ್ರೀಕರಣಕ್ಕೆ ಮೊರೆಹೋಗಬೇಕಾದ ಕಾಲಸ್ಥಿತಿಗೆ ಹಲವಾರು ಯಂತ್ರಗಳನ್ನು ನಾನಾ ತಂತ್ರಜ್ಞರು ಕಂಡು ಹಿಡಿದು ಕಂಪನಿಗಳ ಮೂಲಕ ಮಾರಾಟ ಮಾಡುತ್ತಿದ್ದರೆ ರೈತರೋರ್ವರು ಉಳುಮೆಯಂತ್ರಕ್ಕೆ ಸ್ಥಳೀಯ ವೆಲ್ಡಿಂಗ್ ಕೆಲಸದವರಿಂದ ನಾನಾ ಆವಿಷ್ಕಾರ ಮಾಡಿ ಕಟ್ಟಿಗೆ ಒಡೆಯುವ ಯಂತ್ರವನ್ನು ಮಾಡಿ ಗ್ರಾಮೀಣ ಭಾಗದಲ್ಲಿ ಕಟ್ಟಿಗೆಯನ್ನು ಬಳಸಿ ಅಡುಗೆ ಮಾಡುವವರಿಗೆ ವರದಾನವಾಗಿದೆ.
ಶಿರಿಯಾರದ ಸಂತೋಷ ಪೂಜಾರಿಯವರು ಡೀಸೆಲ್ ಇಂಧನದ ಉಳುಮೆ ಯಂತ್ರಕ್ಕೆ ನಾನಾ ಸಲಕರಣೆಯಿಂದ ಹೈಡ್ರೋಲಿಕ್ ವ್ಯವಸ್ಥೆ ಕಲ್ಪಿಸಿ ಕೊಡಲಿಯಂತಹ ಬೃಹತ್ ಯಂತ್ರದಿಂದ ದೊಡ್ಡ ಕಟ್ಟಿಗೆಯನ್ನು ಇಬ್ಬಾಗ ಮಾಡುವುದಕ್ಕೆ 3 ಮಂದಿ ಸಹಾಯಕರಿಂದ ಒಡೆದು ಮಾನವ ಶಕ್ತಿಯ ಹತ್ತು ಪಟ್ಟು ಬೇಗನೆ ಮಾಡುತ್ತಿದ್ದು ಗಂಟೆಗೆ 1100 ರೂ ನಿಗದಿ ಪಡಿಸಲಾಗದೆ.
ಗ್ರಾಮೀಣ ಭಾಗದಲ್ಲಿ ಇಂದಿಗೂ ಕೆಲವು ಆಹಾರಗಳನ್ನು ಕಟ್ಟಿಗೆಯಿಂದ ಬೇಯಿಸಿ ಮಾಡಿದ ಆಹಾರಕ್ಕೆ ಇರುವ ರುಚಿ ಮತ್ತು ಆರೋಗ್ಯಕ್ಕೆ ಒಣ ಮರಗಳ ಕಟ್ಟಿಗೆಯನ್ನು ಮಾನವಶಕ್ತಿಯಿಂದ ಕೊಡಲಿ ಮೂಲಕ ಒಡೆಯುವ ಹಳೆ ವಿಧಾನಕ್ಕೆ ಇದೀಗ ಹೊಸ ಆವಿಷ್ಕಾರ ನೀಡಿದುದು ತುಂಬಾ ಜನರಿಗೆ ಉಪಯೋಗವಾಗಿದೆ.
PublicNext
03/06/2026 05:54 pm
LOADING...