ಸಕಲೇಶಪುರ: ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಯಾರೂ ಚಿಕ್ಕವರಲ್ಲ, ದೊಡ್ಡವರಲ್ಲ ಎಂಬ ಸಂದೇಶವನ್ನು ಕಾರ್ಯದ ಮೂಲಕ ಸಾರಿದರು ಸಕಲೇಶಪುರ ಶಾಸಕ ಸಿಮೆಂಟ್ ಮಂಜು.
ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಮತ್ತು ತ್ಯಾಜ್ಯ ಸಂಗ್ರಹಿಸುತ್ತಿದ್ದ ಚಿಂದಿ ಆಯುವ ಕೆಲಸಗಾರರನ್ನು ಕಂಡು ಕಾರು ನಿಲ್ಲಿಸಿ, ಅವರ ಬಳಿ ನೇರವಾಗಿ ಹೋಗಿ ಭೇಟಿ ಮಾಡಿದ ಶಾಸಕರು, ಅವರ ಕಷ್ಟಕರ ಕೆಲಸವನ್ನು ಆಸಕ್ತಿಯಿಂದ ಕೇಳಿ ತಿಳಿದುಕೊಂಡರು. ನಂತರ ಅವರನ್ನು ಹೃದಯಪೂರ್ವಕವಾಗಿ ಅಭಿನಂದಿಸಿ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಮೆಂಟ್ ಮಂಜು,
“ಪರಿಸರ ಉಳಿಸುವ ಕೆಲಸದಲ್ಲಿ ದೊಡ್ಡದು-ಚಿಕ್ಕದು ಎಂಬ ಭೇದವಿಲ್ಲ. ಸಾರ್ವಜನಿಕರು ಎಸೆಯುವ ತ್ಯಾಜ್ಯಗಳನ್ನು ಸಂಗ್ರಹಿಸುವ ಈ ಸಹೋದರ-ಸಹೋದರಿಯರು ನಿಜವಾದ ಪರಿಸರ ಯೋಧರು. ಪ್ರತಿಯೊಬ್ಬರ ಶ್ರಮಕ್ಕೂ ಗೌರವ ಸಿಗಬೇಕು,” ಎಂದು ಹೇಳಿದರು
ರಸ್ತೆಯಲ್ಲಿ ಧೂಳು-ಕಸದ ನಡುವೆ ತಮ್ಮ ಜೀವನ ಸಾಗಿಸುವ ಈ ಸಾಮಾನ್ಯ ಕೆಲಸಗಾರರ ಕಾರ್ಯವನ್ನು ಗುರುತಿಸಿ, ಕಾರಿನಿಂದ ಇಳಿದು ಅವರೊಂದಿಗೆ ಮಾತನಾಡಿ ಪ್ರೋತ್ಸಾಹಿಸಿದ ಮಂಜು ಅವರ ಸರಳತೆ ಮತ್ತು ಜನಸ್ನೇಹಿ ನಡವಳಿಕೆ ಸಾರ್ವಜನಿಕರ ಮನ ಗೆದ್ದಿದೆ.
PublicNext
06/06/2026 07:47 pm
LOADING...