ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಮತ್ತೆ ಕಳ್ಳರ ಗ್ಯಾಂಗ್ ಆಕ್ಟಿವ್ ಆಗಿದೆ.
ನಗರದ ದರ್ಗಾ ಹತ್ತಿರದ ಟೀಚರ್ಸ್ ಕಾಲೋನಿಯಲ್ಲಿ ಕಳ್ಳರ ಗ್ಯಾಂಗ್, ಎರಡು ಬೈಕ್ ಮತ್ತು ಮನೆ ಬೀಗ ಮುರಿದು ಚಿನ್ನಾಭರಣ ಕಳ್ಳತನ ಮಾಡಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿರುವ ಮೂರು ಜನ ಕಳ್ಳರು ಬಸವರಾಜ ಮೊಕಾಶಿ, ಅಬ್ದುಲರೆಹಮಾನ್ ರೇಷ್ಮೆ ಎಂಬುವವರ ಎರಡು ಬೈಕ್‌ಗಳನ್ನ ಕಳ್ಳತನ ಮಾಡಿದ್ದಾರೆ.
ಬಳಿಕ ರಾಜಶೇಖರ ಹುದ್ದಾರ ಎಂಬುವವರ ಮನೆಯಲ್ಲಿ ಕಳ್ಳರು ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನ ಕಳ್ಳತನ ಮಾಡಿದ್ದಾರೆ. ಕಳ್ಳರ ಚಲನವಲನ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
PublicNext
07/06/2026 05:38 pm
LOADING...