ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅತ್ತೆ-ಅಳಿಯನ ವಿಚಿತ್ರ ಪ್ರೇಮಪುರಾಣ: ಉತ್ತರ ಪ್ರದೇಶದಲ್ಲಿ ಸಮಾಜವೇ ತಲೆತಗ್ಗಿಸಿದ ವಿವಾಹ

ಕಾನ್ಪುರ (ಉತ್ತರ ಪ್ರದೇಶ) : ಭಾರತೀಯ ಸಮಾಜದಲ್ಲಿ ಅತ್ತೆ ಮತ್ತು ಅಳಿಯನ ಸಂಬಂಧವನ್ನು ತಾಯಿ-ಮಗನ ಸ್ಥಾನದಲ್ಲಿ ಗೌರವಿಸಲಾಗುತ್ತದೆ. ಆದರೆ, ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಅಕ್ಬರ್‌ಪುರ ಪ್ರದೇಶದಿಂದ ಬೆಳಕಿಗೆ ಬಂದಿರುವ ಒಂದು ಘಟನೆ ಇಡೀ ಸಮಾಜವೇ ತಲೆತಗ್ಗಿಸುವಂತಹ, ನಂಬಲು ಅಸಾಧ್ಯವಾದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಅತ್ತೆ ಮತ್ತು ಅಳಿಯ ಪರಸ್ಪರ ಪ್ರೀತಿಸಿ, ನ್ಯಾಯಾಲಯಕ್ಕೆ ತೆರಳಿ ಅಧಿಕೃತವಾಗಿ ವಿವಾಹವಾಗಿದ್ದಾರೆ! ಈ ವಿಲಕ್ಷಣ ವಿವಾಹದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಥಳೀಯ ಮೂಲಗಳ ಪ್ರಕಾರ, ಅಕ್ಬರ್‌ಪುರ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಈ ಯುವಕನಿಗೆ ಕೆಲ ವರ್ಷಗಳ ಹಿಂದೆ ವಿವಾಹವಾಗಿತ್ತು. ಮದುವೆಯಾದ ಬಳಿಕ ಆತನ ಮನೆಗೆ ಅತ್ತೆ (ಪತ್ನಿಯ ತಾಯಿ) ಭೇಟಿ ಮತ್ತು ಓಡಾಟ ಹೆಚ್ಚಾಗಿತ್ತು. ಇದೇ ವೇಳೆ, ಅಳಿಯ ಮತ್ತು ಅತ್ತೆಯ ನಡುವೆ ಆತ್ಮೀಯತೆ ಬೆಳೆದು, ಅದು ದಿನಕಳೆದಂತೆ ಅಕ್ರಮ ಪ್ರೇಮ ಸಂಬಂಧಕ್ಕೆ ತಿರುಗಿದೆ ಎನ್ನಲಾಗಿದೆ.

ಈ ವಿಚಾರ ಪತ್ನಿ ಮತ್ತು ಇಬ್ಬರ ಕುಟುಂಬಸ್ಥರಿಗೆ ತಿಳಿಯುತ್ತಿದ್ದಂತೆ ಮನೆಯಲ್ಲಿ ಭಾರಿ ಗಲಾಟೆ ಹಾಗೂ ಪಂಚಾಯಿತಿ ಕೂಡ ನಡೆದಿತ್ತು. ಆದರೆ, ಕುಟುಂಬದ ವಿರೋಧಕ್ಕೆ ಕ್ಯಾರೇ ಎನ್ನದ ಈ ಜೋಡಿ, ಜೊತೆಯಾಗಿ ಬದುಕಲು ನಿರ್ಧರಿಸಿ ಮನೆಯಿಂದ ಓಡಿಹೋಗಿದ್ದರು.

ಮನೆಯಿಂದ ನಾಪತ್ತೆಯಾಗಿದ್ದ ಇವರಿಬ್ಬರು ನೇರವಾಗಿ ಕಾನ್ಪುರದ ಅಕ್ಬರ್‌ಪುರ ಕೋರ್ಟ್‌ಗೆ ತಲುಪಿದ್ದಾರೆ. ಅಲ್ಲಿ ವಕೀಲರ ಸಮ್ಮುಖದಲ್ಲಿ ಇಬ್ಬರೂ ಪರಸ್ಪರ ಒಪ್ಪಿಗೆಯ ಪತ್ರಗಳಿಗೆ ಸಹಿ ಹಾಕಿ, ಕಾನೂನಾತ್ಮಕವಾಗಿ ಕೋರ್ಟ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಮದುವೆಯ ನಂತರ ಇಬ್ಬರೂ ಮಾಲಾರ್ಪಣೆ ಮಾಡಿಕೊಂಡು, ಅಳಿಯ ತನ್ನ ಅತ್ತೆಯ ಹಣೆಗೆ ಸಿಂಧೂರ ಇಡುತ್ತಿರುವ ದೃಶ್ಯಗಳನ್ನು ಅಲ್ಲಿ ನೆರೆದಿದ್ದ ಕೆಲವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಕೋರ್ಟ್ ಆವರಣದಲ್ಲಿ ನಡೆದ ಈ ಮದುವೆಯ ವಿಡಿಯೋ ಕ್ಲಿಪ್ ಎಕ್ಸ್ (ಟ್ವಿಟರ್) ಮತ್ತು ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಸಖತ್ ವೈರಲ್ ಆಗಿದೆ. ನೆಟ್ಟಿಗರು ಈ ವಿಡಿಯೋ ನೋಡಿ ತೀವ್ರ ಆಘಾತ ವ್ಯಕ್ತಪಡಿಸುತ್ತಿದ್ದಾರೆ. "ಸಮಾಜದಲ್ಲಿ ಪವಿತ್ರವಾದ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಇದು ಕಲಿಯುಗದ ಪರಮಾವಧಿ" ಎಂದು ಬಹುತೇಕ ಬಳಕೆದಾರರು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಈ ವಿಚಿತ್ರ ಜೋಡಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.

Edited By : Nirmala Aralikatti
PublicNext

PublicNext

08/06/2026 03:00 pm

Cinque Terre

21.68 K

Cinque Terre

2