ಮುಲ್ಕಿ:ಸಸಿಹಿತ್ಲು ಬಿಲ್ಲವರ ಹಿತವರ್ಧಕ ಸಂಘ ಸಂಚಾಲಕತ್ವದ ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಸಭಾಂಗಣದಲ್ಲಿ ಕಾಂತಾಬಾರೆ ಬುದಾಬಾರೆ ವಿದ್ಯಾನಿಧಿ ಸಹಯೋಗದೊಂದಿಗೆ ಜೂ.7 ಭಾನುವಾರ ಬೆಳಗ್ಗೆ ಸಸಿಹಿತ್ಲು ಗ್ರಾಮದ ಎಸ್.ಎಸ್.ಎಲ್. ಸಿ, ಪಿಯುಸಿ, ಡಿಗ್ರಿ, ಡಿಪ್ಲೊಮಾ, ಇಂಜಿನಿಯರಿಂಗ್ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮ,ಅಶಕ್ತರಿಗೆ ಆರೋಗ್ಯ ನಿಧಿ ವಿತರಣೆ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರದ ಕೋಶಾಧಿಕಾರಿ ದಯಾನಂದ ಗುರಿಕಾರ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಸವಲತ್ತುಗಳನ್ನು ಪಡೆದು ಕ್ರಿಯಾಶೀಲರಾಗಿ ಎಂದರು.
ಮುಖ್ಯ ಅತಿಥಿಗಳಾಗಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ , ಉದ್ಯಮಿ ಜಯಂತಿ ಬಾಬು ಬಂಗೇರ, ವಿಶ್ವನಾಥ್ ಕೋಟ್ಯಾನ್, ಕ್ಷೇತ್ರದ ಅಧ್ಯಕ್ಷರು ಜಗನ್ನಾಥ ಕೋಟ್ಯಾನ್, ಉಪಾಧ್ಯಕ್ಷ ಅನಿಲ್ ಪೂಜಾರಿ, ಕಾಂತುಲಕಣ ಯಾನೆ ಪಠೇಲರ ಮನೆತನದ ಲೀಲಾಧರ ಬಂಗೇರ, ನಿರಂಜನ್ ಬಂಗೇರ, ರಮೇಶ್ ಸನಿಲ್, ಕ್ಷೇತ್ರದ ಅರ್ಚಕರಾದ ಸುರೇಶ್ ಪೂಜಾರಿ, ದಾಮೋದರ ಪೂಜಾರಿ,ಕಡಪುರ ಮನೆತನದ ಹೇಮಚಂದ್ರ, ಗಂಗಾಧರ ಎ. ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಮಹಿಳಾ ವಿಭಾಗದ ಅಧ್ಯಕ್ಷೆ ಪುಷ್ಪಾ ದಯಾನಂದ್, ಲೀಲಾ ವಸಂತ್ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್ ಆರ್ ಪ್ರಭಾತ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯದರ್ಶಿ ನವೀನ್ ಕುಮಾರ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಹರೀಶ್ ಪೂಜಾರಿ ಧನ್ಯವಾದ ಅರ್ಪಿಸಿದರು
ಕಾರ್ಯಕ್ರಮದಲ್ಲಿ ಆರೋಗ್ಯ ನಿಧಿ ಉದ್ಘಾಟಿಸಲಾಯಿತು.
ದಾನಿಗಳಾದ ಜಯಂತಿ ಬಾಬು ಬಂಗೇರ, ವಿಶ್ವನಾಥ ಕೋಟ್ಯಾನ್, ಪೂಜಾ ಅರೇಂಜರ್ಸ್‌ನ ಜೈಕೃಷ್ಣ ಕೋಟ್ಯಾನ್ ರವರಿಗೆ ಗೌರವ ಸನ್ಮಾನ ನಡೆಯಿತು. ಸಸಿಹಿತ್ಲು ಗ್ರಾಮದ 25 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು
Kshetra Samachara
08/06/2026 08:20 pm
LOADING...