ಬ್ರಹ್ಮಾವರ: ಉಡುಪಿ ಮತ್ತು ದಕ ಜಿಲ್ಲಾ ವಿಶ್ವಕರ್ಮ ಸಂಘ ಸಂಸ್ಥೆಗಳ ಕೇಂದ್ರ ಸಂಸ್ಥೆ ವಿಶ್ವಕರ್ಮ ಒಕ್ಕೂಟದ ವತಿಯಿಂದ ವಿಶ್ವಕರ್ಮ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಭಜನಾ ವೈಭವ 2026 ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ಭಾನುವಾರ ಜರುಗಿತು.
ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಭಾಗವಹಿಸಿ ಮಾತನಾಡಿ ವಿಶ್ವಕರ್ಮರು ಹುಟ್ಟುಕಲಾವಿದರು ಸಂಗೀತದಿಂದ ಅಸಾಧ್ಯವಾದುದು ಯಾವುದು ಇಲ್ಲ ಸರಸ್ವತಿ ದೇವಿ ಪ್ರಯತ್ನ ಪಟ್ಟರೆ ಎಲ್ಲರಿಗೂ ಒಲಿಯುತ್ತಾಳೆ ಎಂದರು. ಒಕ್ಕೂಟದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ತೀರ್ಪುಗಾರರನ್ನು ಹೊರತು ಪಡಿಸಿ, ಭಜನೆಯ ಹಾಡುಗಾರರು ಮತ್ತು ಪಕ್ಕವಾದ್ಯಗಾರರು ವಿಶ್ವಕರ್ಮ ಸಮಾಜದವರೇ ಇರುವ ಕರಾವಳಿ ಜಿಲ್ಲೆಯ ಒಟ್ಟು 20 ತಂಡಗಳು ಭಜನೆಯಲ್ಲಿ ಭಾಗವಹಿಸಿದ್ದು ಕನ್ನಡ ಭಾಷೆ ಮತ್ತು ದಾಸಪರಂಪರೆಯ ಉಳಿವಿನೊಂದಿಗೆ ಸನಾತನ ಸಂಸ್ಕೃತಿಯ ಜಾಗೃತಿಗಾಗಿ ಭಜನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ಉಪಾಧ್ಯಕ್ಷ ಅಲೇವೂರು ಯೋಗೀಶ್ ಆಚಾರ್ಯ, ಕಾರ್ಯದರ್ಶಿ ಮುರಳೀಧರ, ಖಜಾಂಚಿ ಜನಾರ್ದನ ಆಚಾರ್ಯ, ದೇವಸ್ಥಾನದ ಆಡಳಿತ ಮೊಕ್ತೇಸರ ಮುರಹರಿ ಆಚಾರ್ಯ ಶಿಲ್ಪಿ ರಾಜಗೋಪಾಲ್ ಆಚಾರ್ಯ ಕೋಟೇಶ್ವರ ಇನ್ನಿತರು ಉಪಸ್ಥಿತರಿದ್ದರು.
Kshetra Samachara
09/06/2026 12:38 pm
LOADING...