ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯಲ್ಲಿ ಮಾನವೀಯತೆ ಮೆರೆದ ಅಕ್ಕಪಡೆ !

ಉಡುಪಿ : ಉಡುಪಿಯಲ್ಲಿ ಅಕ್ಕಪಡೆಯ ಪೊಲೀಸರು ಸಕಾಲಿಕ ಕಾರ್ಯಾಚರಣೆಯಿಂದ ಗಮನ ಸೆಳೆದಿದ್ದಾರೆ. ಸಾರ್ವಜನಿಕರು ಅಕ್ಕಪಡೆಗೆ ಕರೆ ಮಾಡಿ ಕೃಷ್ಣಮಠ ಪಾರ್ಕಿಂಗ್ ಪ್ರದೇಶದಲ್ಲಿ ಮಹಿಳೆಯೊಬ್ಬಳು ಮೂರು ನಾಲ್ಕು ದಿನಗಳಿಂದ ಅಲೆದಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಅಕ್ಕಪಡೆ ಸಿಬ್ಬಂದಿಗಳು ಅಲ್ಲಿಗೆ ಭೇಟಿ ನೀಡಿ ವಿಚಾರಿಸಿದಾಗ ಮಹಿಳೆಯು ತನಗೆ ಯಾರೂ ಇಲ್ಲ ಮತ್ತು ತಾನು ಕೆಲಸ ಹುಡುಕುತ್ತಿರುವುದಾಗಿ ತಿಳಿಸಿದ್ದಾರೆ.

ಮಹಿಳಾ ನಿಲಯದಲ್ಲಿ ಆಶ್ರಯ ನೀಡುವುದಾಗಿ ತಿಳಿಸಿದಾಗ ಆಕೆ ಒಪ್ಪದೇ ತನಗೆ ಎಲ್ಲಿಯಾದರೂ ಕೆಲಸ ಕೊಡಿಸಬೇಕಾಗಿ ಕೇಳಿಕೊಂಡಿದ್ದರು. ಅಕ್ಕಪಡೆ ಸಿಬ್ಬಂದಿಗಳು ಉಡುಪಿ ಕೃಷ್ಣ ಮಠ ದೇವಸ್ಥಾನದ ಆಡಳಿತ ಕಚೇರಿಯಲ್ಲಿ ವಿಚಾರಿಸಿ ಅಲ್ಲಿ ಮಹಿಳೆಗೆ ಆಶ್ರಯ ಹಾಗೂ ಉದ್ಯೋಗದ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Edited By :
PublicNext

PublicNext

09/06/2026 01:11 pm

Cinque Terre

6.57 K

Cinque Terre

0

ಸಂಬಂಧಿತ ಸುದ್ದಿ