ಶಿರಸಿ : ತಾಲೂಕಿನ ಹುಣಸೆಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯ ಕುರಿತು ಮಾಹಿತಿ ನೀಡುವ 'ರೋಜಗಾರ್ ದಿನಾಚರಣೆ'ಯನ್ನು ಆಯೋಜಿಸಲಾಯಿತು. ದುಡಿಯುವ ಕೈಗಳಿಗೆ ಮತ್ತಷ್ಟು ಬಲ ತುಂಬುವ ದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇ-ಕೆವೈಸಿ, ಎನ್‌ಎಂಎಂಎಸ್ ಕಡ್ಡಾಯ
ಬುಧವಾರ ನಡೆದ ಮಾಹಿತಿ ವಿನಿಮಯ ಕಾರ್ಯಕ್ರಮದಲ್ಲಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ (ನರೇಗಾ) ಪಾರದರ್ಶಕತೆ ತರಲು ಇ-ಕೆವೈಸಿ ಕಡ್ಡಾಯಗೊಳಿಸಲಾಗಿದೆ. ಪ್ರತಿಯೊಬ್ಬ ಕೂಲಿಕಾರರೂ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಹಾಗೂ ದಿನಕ್ಕೆ ಎರಡು ಬಾರಿ ಎನ್‌ಎಂಎಂಎಸ್ ಮೂಲಕ ಫೋಟೋ ತೆಗೆಸಿದರೆ ಮಾತ್ರ ಹಾಜರಾತಿ ದಾಖಲಾಗುತ್ತದೆ ಎಂದು ಅರಿವು ಮೂಡಿಸಲಾಯಿತು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಲ್ಲಪ್ಪ ಮಳಗ್ಯಾಣ್ಣನವರ ಮಾತನಾಡಿ, ನರೇಗಾ ಯೋಜನೆಯಡಿ ಕೆಲಸ ಪಡೆಯಲು ಇ-ಕೆವೈಸಿ ಕಡ್ಡಾಯವಾಗಿದೆ. ನೀವೂ, ನಿಮ್ಮ ಕುಟುಂಬದವರು ಮತ್ತು ನಿಮ್ಮ ಸುತ್ತಮುತ್ತಲಿನವರಿಗೂ ಈ ಕುರಿತು ಮಾಹಿತಿ ನೀಡಿ, ಇ-ಕೆವೈಸಿ ಮಾಡಿಸಿಕೊಂಡು ಯೋಜನೆಯ ಸೌಲತ್ತುಗಳನ್ನು ಪಡೆದುಕೊಳ್ಳಬೇಕು. ಅಲ್ಲದೆ, ಗ್ರಾಮದ ಅಭಿವೃದ್ಧಿಗೆ ಪೂರಕವಾದ ಕೆಲಸಗಳನ್ನು ಮಾಡಿ ಗ್ರಾಮವನ್ನು ಅಭಿವೃದ್ಧಿಪಡಿಸೋಣ ಎಂದು ಕರೆ ನೀಡಿದರು.
PublicNext
10/06/2026 06:15 pm
LOADING...