ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳಕ್ಕೆ ಹೊಸ ಸಾರಥಿ - ಪ್ರವೀಣ್ ಕರಾಂಡೆ ಅಧಿಕಾರ ಸ್ವೀಕಾರ

ಭಟ್ಕಳ: ತಾಲೂಕಿನ ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ ಅವರ ವರ್ಗಾವಣೆಯ ಹಿನ್ನೆಲೆಯಲ್ಲಿ, ಹೊನ್ನಾವರ ತಹಶೀಲ್ದಾರ ಪ್ರವೀಣ್ ಕರಾಂಡೆ ಅವರು ಗುರುವಾರ ಭಟ್ಕಳ ತಹಶೀಲ್ದಾರರ ಪ್ರಭಾರವನ್ನು ವಹಿಸಿಕೊಂಡರು.

ಅಧಿಕಾರ ಸ್ವೀಕರಿಸಿದ ಬಳಿಕ ಕಚೇರಿಯಲ್ಲಿ ಸರಳ ಸ್ವಾಗತ ಕಾರ್ಯಕ್ರಮ ನಡೆಯಿತು. ಈ ವೇಳೆ ಉಪತಹಶೀಲ್ದಾರರು, ಶಿರಸ್ತೇದಾರರು ಹಾಗೂ ವಿವಿಧ ವಿಭಾಗಗಳ ಸಿಬ್ಬಂದಿ ನೂತನ ಪ್ರಭಾರಿ ತಹಶೀಲ್ದಾರರಿಗೆ ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡು ಶುಭ ಹಾರೈಸಿದರು.

ಕಚೇರಿಯ ಆಡಳಿತಾತ್ಮಕ ಕಾರ್ಯಗಳ ಕುರಿತು ಅಧಿಕಾರಿಗಳು ಅವರಿಗೆ ಮಾಹಿತಿ ನೀಡಿದರು. ನೂತನ ಪ್ರಭಾರಿ ತಹಶೀಲ್ದಾರರ ಆಗಮನದಿಂದ ಕಚೇರಿಯ ಕಾರ್ಯಚಟುವಟಿಕೆಗಳು ಸುಗಮವಾಗಿ ಮುಂದುವರಿಯಲಿವೆ ಎಂಬ ವಿಶ್ವಾಸವನ್ನು ಸಿಬ್ಬಂದಿ ವ್ಯಕ್ತಪಡಿಸಿದರು.

Edited By : PublicNext Desk
PublicNext

PublicNext

11/06/2026 05:46 pm

Cinque Terre

5.59 K

Cinque Terre

0

ಸಂಬಂಧಿತ ಸುದ್ದಿ