ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ: ಜೂ.15 ರಂದು ಬೇಡ್ತಿ ಅಘನಾಶಿನಿ ನದಿ ಜೋಡಣೆ ಯೋಜನೆ ವಿರೋಧಿಸಿ ಪತ್ರ ಚಳವಳಿ - ಅಶಿಸರ

ಶಿರಸಿ: ಬೇಡ್ತಿ, ಅಘನಾಶಿನಿ ನದಿ ಜೋಡಣೆ ಯೋಜನೆ ವಿರೋಧಿಸಿ ಜೂನ್ 15ರಂದು ಬೃಹತ್ ಪತ್ರ ಚಳುವಳಿಯನ್ನು ನಗರದ ಎಸಿ ಆಫೀಸ್ ಬಳಿ ನಿರ್ಧರಿಸಲಾಗಿದೆ ಎಂದು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮೀತಿ ಅಧ್ಯಕ್ಷ ಅನಂತ ಹೆಗಡೆ ಅಶಿಸರ ಅವರು ನಗರದ ಯೋಗ ಮಂದಿರದಲ್ಲಿ ಸುದ್ದಿಗೋಷ್ಠಿ ಮೂಲಕ ತಿಳಿಸಿದರು.

ಅವರು ಶುಕ್ರವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನಮ್ಮ ಗಟ್ಟಿಯಾದ ನಿರ್ಧಾರವನ್ನು ಮಂಡಿಸುವ ಅವಶ್ಯಕತೆ ಇದೆ. ಈ ಹಿನ್ನಲೆಯಲ್ಲಿ ನಾವು ಉಗ್ರವಾದ ಹೋರಾಟ ಮಾಡುವ ಅನಿವಾರ್ಯತೆ ಇದ್ದ ಕಾರಣ ಬೇಡ್ತಿ ಅಘನಾಶಿನಿ ಗಂಗಾವಳಿ, ಶಾಲ್ಮಲಾ ಕಣಿವೆಗಳ ಜನತೆ ಹಾಗೂ ಸಾವಿರಾರು ಜನರು ಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

ಅಲ್ಲದೆ ಈ ಸಂದರ್ಭದಲ್ಲಿ ನೂರಾರು ಹಳ್ಳಿಗಳ ಜನತೆ ಸಹಕಾರಿ ಧುರೀಣರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಮಾತೃ ಮಂಡಳಿ, ಸ್ವಸಹಾಯ ಸಂಘ, ವನವಾಸಿ ಸಂಘ, ಮಹಿಳಾ ಸಂಘಟನೆಗಳು ಭಾಗವಹಿಸಿ ಎಸಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಚಳುವಳಿಯ ಪತ್ರಗಳನ್ನು ತಲುಪಿಸುತ್ತೇವೆ ಎಂದರು.

ಈ ಹಿಂದೆಯೂ ನಾವು ಅನೇಕ ರೀತಿಯ ವಿಶೇಷವಾದ ಹೋರಾಟಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಹೋರಾಟ ಈಗಾಗಲೇ ಮಾಡಿದ್ದೇವೆ. ಈ ಒಂದು ನದಿ ಜೋಡಣೆ ಮಾಡುವುದರಿಂದ ಏನೇನು ಅನಾಹುತಗಳು ಸಂಭವಿಸುತ್ತವೆ ಹಾಗೂ ಇಲ್ಲಿಯ ಜನರ ಬದುಕಿನ ಮೇಲೆ ಯಾವ ರೀತಿ ವ್ಯತರಿಕ್ತವಾದ ಪರಿಣಾಮ ಬೀರುತ್ತದೆ ಎಂಬುದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡುವುದಲ್ಲದೆ ದೇಶ ವ್ಯಾಪಿ ಆಂದೋಲನ ಆಗಿದೆ ಎಂದು ಹೇಳಿದರು.

ನಂತರ ಮಾತನಾಡಿದ ವಿಶ್ವನಾಥ್ ಹೆಗಡೆ ಸೀಗೆಹಳ್ಳಿ ಅವರು ಈ ನದಿ ಜೋಡಣೆ ವಿರೋಧಿಸಲು ಈ ಪತ್ರ ಚಳುವಳಿಯಲ್ಲಿ ಸಾವಿರಾರು ಜನ ಸೇರಿಸುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.

ನಂತರ ಮಾತನಾಡಿದ ಟಿ ಎಸ್ ಎಸ್ ಸಂಸ್ಥೆಯ ಅಧ್ಯಕ್ಷ ಗೋಪಾಲ ಕೃಷಣ ವೈದ್ಯ ಅವರು ಈ ಬೇಡ್ತಿ ಅವಿನಾಸಿನಿ ನದಿ ಅವಲಂಬಿಸಿ 40ರಿಂದ 50 ಸಾವಿರ ಕುಟುಂಬಗಳು ಜೀವನ ನಡೆಸುತ್ತೇವೆ. ಅವರ ಅಳಿವು ಉಳಿವಿನ ಅಸ್ತಿತ್ವ ಇದರಲ್ಲಿ ಅಡಗಿದೆ. ಆದುದರಿಂದ ಈ ಯೋಜನೆಯನ್ನು ಜಾರಿಗೆ ತರಬಾರದು ಎಂದು ನಮ್ಮೆಲ್ಲರ ಆಗ್ರಹವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀಮತಿ ಮಧುಮತಿ ಹೆಗಡೆ, ರತ್ನಾಕರ್ ಸೇರಿದಂತೆ ಅನೇಕರು ಇದ್ದರು.

Edited By : PublicNext Desk
Kshetra Samachara

Kshetra Samachara

13/06/2026 10:12 am

Cinque Terre

3.6 K

Cinque Terre

0

ಸಂಬಂಧಿತ ಸುದ್ದಿ