ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದಾಪುರ : ವಿದ್ಯುತ್ ಖಾಸಗೀಕರಣ ಗೊಳಿಸುವುದನ್ನು ವಿರೋಧಿಸಿ 17 ರಂದು ಪ್ರತಿಭಟನೆ

ಸಿದ್ದಾಪುರ : ವಿದ್ಯುತ್ ಖಾಸಗಿಕರಣ ಗೊಳಿಸುವುದನ್ನು ವಿರೋಧಿಸಿ ರೈತ ಕ್ಷೇಮಾಭಿವೃದ್ಧಿ ಸಮಿತಿ ಉತ್ತರ ಕನ್ನಡ ಹಾಗೂ ಹೆಸ್ಕಾಂ ನೌಕರರು ತಾಲೂಕಿನ ರೈತರು ಜೂನ್ 17ರ ಬುಧವಾರದಂದು ಬೆಳಗ್ಗೆ 10.30 ಕ್ಕೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ವೀರಭದ್ರ ನಾಯ್ಕ್ ತಿಳಿಸಿದರು.

ಸಿದ್ದಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಕೇಂದ್ರದ ಒಂದು ಕಾಯ್ದೆಯನ್ನು ಇಟ್ಟುಕೊಂಡು, ರಾಜ್ಯ ಸರ್ಕಾರಕ್ಕೆ ಟಾಟಾ ಕಂಪನಿಯವರು, ಟಾಟಾ ಪವರ್ ಕಂಪನಿ ಲಿಮಿಟೆಡ್ ಅವರು ನಾವು ವಿದ್ಯುತ್ ಇಲಾಖೆ ನಡೆಸುತ್ತೇವೆ, ನಿಮಗೆ ಲಾಭವನ್ನು ಮಾಡಿಕೊಡುತ್ತೇವೆ, ಜನರಿಗೆ ಅನುಕೂಲ ಮಾಡಿಕೊಡುತ್ತೇವೆ ಅಂತ ಹೇಳಿ ಈಗಾಗಲೇ ಅರ್ಜಿಯನ್ನು ಹಾಕಿದ್ದು ತಮ್ಮ ಗಮನಕ್ಕೂ ಬಂದಿದೆ. ಹೀಗೆ ಸರ್ಕಾರ ಕಂಪನಿಗೆ ವಹಿಸಿಕೊಟ್ಟರೆ ಮುಂದೆ ಇಲಾಖೆ ನೌಕರರಿಗೆ ಸಾರ್ವಜನಿಕರಿಗೆ ನಾಡಿನ ಜನತೆಗೆ ಬಹಳಷ್ಟು ಸಮಸ್ಯೆಗಳು ಉಂಟಾಗಿರುವ ಅರಿತು ಕೂಡಲೇ ಸರ್ಕಾರ ಈ ಯೋಚನೆಯನ್ನು ಕೈಬಿಡಬೇಕು ಎಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದರು.

ನಿವೃತ್ತ ಹೆಸ್ಕಾಂ ಇಂಜಿನಿಯರ್ ಆಂಥೋನಿ ಮಾತನಾಡಿ, ನಮ್ಮ ವಿದ್ಯುತ್ ಕ್ಷೇತ್ರವನ್ನು ಖಾಸಗಿಕರಣ ಆವರಿಸುತ್ತಾ ಇರುವುದು ಬಹಳ ವಿಷಾದನೀಯ. ಯಾಕೆ ಅಂದರೆ, ಈ ಕ್ಷೇತ್ರಕ್ಕೆ ಸಾವಿರಾರು ಜನರ ಬಲಿದಾನ ಈಗಾಗಲೇ ಆಗಿದೆ. ಪ್ರತಿಯೊಂದು ದಿವಸಕ್ಕೂ ಒಬ್ಬ ಲೈನ್ ಮ್ಯಾನ್ ತನ್ನ ಪ್ರಾಣ ಕಳೆದುಕೊಳ್ಳುತ್ತಿದ್ದಾನೆ. ಜಗತ್ತಿಗೆ ಬೆಳಕು ಕೊಟ್ಟವನು ತನ್ನ ಮನೆಯನ್ನು ಕತ್ತಲಿನಲ್ಲಿ ಇಟ್ಟುಕೊಳ್ಳುವಂತಹ ಒಂದು ಸೈನಿಕ ಪ್ರವೃತ್ತಿಯ ಒಂದು ಕರ್ತವ್ಯ ಪ್ರಜ್ಞೆಯನ್ನು ಇಲ್ಲಿ ನಮ್ಮ ನೌಕರರು ಹೊಂದಿದ್ದಾರೆ.

ಇವತ್ತು ಈ ಕ್ಷೇತ್ರವನ್ನು ಖಾಸಗಿಯವರು ಲಾಭದ ಉದ್ದೇಶದಿಂದ ತಾವು ಹಣ ಗಳಿಸಬೇಕು ಅನ್ನೋ ಉದ್ದೇಶದಿಂದ ಇದನ್ನು ಆವರಿಸಬೇಕು ಅನ್ನೋ ವಿಚಾರವನ್ನು ಮಾಡಿದ್ದಾರೆ. ಇದರಿಂದ ಪರೋಕ್ಷವಾಗಿ ನಾವು ನೌಕರರಿಗೂ ಸಹ ಎಷ್ಟೋ ತೊಂದರೆಗಳು ಆಗುತ್ತವೆ.

ಆ ಅರ್ಜಿಯನ್ನ ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ತಿರಸ್ಕಾರ ಮಾಡಬೇಕು. ಸಂಬಂಧಪಟ್ಟಂತೆ ಸರ್ಕಾರ ಇದರ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ರೈತರ ಹಿತವನ್ನು ನೋಡಿಬಿಟ್ಟು, ಉದ್ಯಮವನ್ನು ಬೆಳೆಸಬೇಕು ಅನ್ನೋದಾದರೆ ಖಾಸಗಿಯವರಿಗೆ ಈ ವಿದ್ಯುತ್ ಕ್ಷೇತ್ರವನ್ನು ಹೋಗದಂತೆ ನೋಡಿಕೊಳ್ಳುವಂತಹ ಕೆಲಸ ಆಗಬೇಕು ಎಂದರು.

ಈ ಸಂದರ್ಭದಲ್ಲಿ ಹೆಸ್ಕಾಂ ನೌಕರರ ಸಂಘದ ರವಿ ನಾಯ್ಕ್ ರೈತ ಸಂಘದ ಪದಾಧಿಕಾರಿಗಳು ಹಾಗೂ ಸೆಕ್ಷನ್ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

12/06/2026 04:21 pm

Cinque Terre

3.16 K

Cinque Terre

0

ಸಂಬಂಧಿತ ಸುದ್ದಿ