ಸವದತ್ತಿ: ಸವದತ್ತಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ತುರ್ತು ಹೃದ್ರೋಗ ಚಿಕಿತ್ಸೆಯನ್ನು ಶೀಘ್ರವಾಗಿ ಒದಗಿಸುವ ಉದ್ದೇಶದಿಂದ ಧಾರವಾಡದ ಎಸ್‌ಡಿಎಮ್ ನಾರಾಯಣ ಹಾರ್ಟ್ ಸೆಂಟರ್ ಮತ್ತು ದೇವಿ ಆರೋಗ್ಯಧಾಮದ ಸಹಯೋಗದಲ್ಲಿ ಉಚಿತ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿದೆ.
ನಾರಾಯಣ ಹೃದಯಾಲಯದ ಅಂಗ ಸಂಸ್ಥೆಯಾಗಿರುವ ಎಸ್‌ಡಿಎಮ್ ನಾರಾಯಣ ಹಾರ್ಟ್ ಸೆಂಟರ್ ಹಾಗೂ ದೇವಿ ಆರೋಗ್ಯಧಾಮದ ನಡುವಿನ ಒಡಂಬಡಿಕೆಯಡಿ ಆರಂಭಗೊಂಡಿರುವ ಈ ಸೇವೆಯ ಮೂಲಕ ತುರ್ತು ರೋಗಿಗಳನ್ನು ಸವದತ್ತಿಯಿಂದ ಧಾರವಾಡದ ಎಸ್‌ಡಿಎಮ್ ನಾರಾಯಣ ಹಾರ್ಟ್ ಸೆಂಟರ್‌ಗೆ ಉಚಿತವಾಗಿ ಸಾಗಿಸಲಾಗುತ್ತದೆ.
ಈ ಸೇವೆಗೆ ಗುರ್ಲಹೊಸೂರ್ ಅರ್ಬನ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಬಸವರಾಜ್ ಕಾರದಗಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಹೃದಯಾಘಾತದಂತಹ ತುರ್ತು ಸಂದರ್ಭಗಳಲ್ಲಿ ‘ಗೋಲ್ಡನ್ ಅವರ್’ ಅತ್ಯಂತ ಮಹತ್ವದ್ದಾಗಿದ್ದು, ಈ ಉಚಿತ ಆಂಬುಲೆನ್ಸ್ ಸೇವೆ ಅನೇಕ ಜೀವಗಳನ್ನು ಉಳಿಸಲು ನೆರವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಮ್ ನಾರಾಯಣ ಹಾರ್ಟ್ ಸೆಂಟರ್‌ನ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ದುಂಡೇಶ ತಡಕೋಡ, ಪ್ರವೀಣ್ ಪಟ್ಟಣಶೆಟ್ಟಿ, ಡಾ. ಅರುಣ್ ಮಾಳಿ, ಶಿವು ಶಿಂತ್ರೆ, ಸುರೇಶ ಬನಸಾಲಿ, ರಾಜು ಪಟ್ಟಣಶೆಟ್ಟಿ, ಶಾಂತಿಲಾಲ ಜೈನ ಸೇರಿದಂತೆ ದೇವಿ ಆರೋಗ್ಯಧಾಮದ ವೈದ್ಯರು, ಸಿಬ್ಬಂದಿ ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.
ಉಚಿತ ಆಂಬುಲೆನ್ಸ್ ಸೇವೆಗಾಗಿ ಸಂಪರ್ಕ: 97313 50549.
PublicNext
10/06/2026 06:34 pm
LOADING...