ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ದುಡಿಯುವ ಜೀವಕ್ಕೆ ನೆರಳಿನ ಆಸರೆ, BSC ಯಿಂದ ಕೊಡೆ ವಿತರಣೆ, ವಿನೂತನ ಕಾರ್ಯ

ಬೆಳಗಾವಿ: ಕಷ್ಟದ ಬದುಕಿನಲ್ಲಿಯೂ ಜೀವನ ನಡೆಸುವ ಬೀದಿ ಬದಿಯ ವ್ಯಾಪಾರಸ್ಥರಿಗೆ ನೆರಳು ನೀಡಲು BSC the textile Mall ವಿನೂತನ ಕಾರ್ಯಕ್ಕೆ ಮುಂದಾಗಿದೆ.

ಬೆಳಗಾವಿಯಲ್ಲಿ ಬಿಸಿಲಿನ ತಾಪದಲ್ಲಿಯೇ ಬೆವರು ಸುರಿಸಿ ದುಡಿಯುವ ಜನರ ಕಷ್ಟಕ್ಕೆ ಸ್ಪಂದಿಸಲು ಬಿ.ಎಸ್.ಸಿ ಮುಂದಾಗಿದೆ. ಈ ನಿಟ್ಟಿನಲ್ಲಿ ಬೀದಿ ಬದಿಯಲ್ಲಿ ತರಕಾರಿ, ಹಣ್ಣು ಹಂಪಲು ಮಾರಾಟ ಮಾಡುವ ಶ್ರಮಜೀವಿಗಳಿಗೆ ನೆರಳು ನೀಡುವ ವಿನೂತನ ಕಾರ್ಯಕ್ಕೆ ಮುಂದಾಗಿದ್ದು, ಅಭಿಯಾನದ ಮೂಲಕ ನೂರಾರು ಜನರಿಗೆ ಕೊಡೆಯನ್ನು ನೀಡುವ ಮೂಲಕ ಸಹಾಯ ಹಸ್ತವನ್ನು ನೀಡುತ್ತಿದೆ.

ಇನ್ನೂ ಆರ್ಥಿಕವಾಗಿ ಹಿಂದುಳಿದ ಜನರ ಏಳಿಗೆಗೆ ಶ್ರಮಿಸುವ ಸದುದ್ದೇಶದಿಂದ ಬೆಳಗಾವಿಯ BSC the textile Mall ವಿನೂತನ ಹಾಗೂ ವಿಭಿನ್ನ ಕಾರ್ಯಕ್ಕೆ ಮುಂದಾಗಿದ್ದು, ಇಂತಹದೊಂದು ಕಾರ್ಯ ಇನ್ನೂ ಹೆಚ್ಚು ಹೆಚ್ಚು ಜನರಿಗೆ ತಲುಪಲಿ ಎಂಬುವುದು ನಮ್ಮ ಆಶಯ.

Edited By : Shivu K
PublicNext

PublicNext

17/06/2026 07:02 pm

Cinque Terre

9.93 K

Cinque Terre

0

ಸಂಬಂಧಿತ ಸುದ್ದಿ