ದಾಂಡೇಲಿ : ಮಳೆಗಾಲದಲ್ಲಿ ಎದುರಾಗುವ ವಿದ್ಯುತ್ ಅವಘಡ ತಡೆಯಲು ಹೆಸ್ಕಾಂ ಸಕಲ ಸಿದ್ಧತೆ ಮಾಡಿಕೊಂಡಿದ್ದು, ದಾಂಡೇಲಿ ಉಪವಿಭಾಗದ ದಾಂಡೇಲಿ ಹಾಗೂ ಜೋಯಿಡಾ ತಾಲೂಕಿಗೆ ಸಹಾಯವಾಣಿ ಲಭ್ಯವಿರಲಿದೆ ಎಂದು ತಿಳಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ದಾಂಡೇಲಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರು, ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಸಂಬಂಧಿತ ಅವಘಡಗಳ ಸಂಭವ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆ ಸಾರ್ವಜನಿಕರ ಅನುಕೂಲಕ್ಕಾಗಿ ಸಹಾಯವಾಣಿಗಳು ಲಭ್ಯವಿರಲಿವೆ ಎಂದಿದ್ದಾರೆ.
ದಾಂಡೇಲಿ ತಾಲೂಕಿನ ದಾಂಡೇಲಿ ( ಸಿಎಂಸಿ ಏರಿಯಾ), ಅಂಬೇವಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಶಾಖಾಧಿಕಾರಿಯ ನಂ 9480881764, 24x7 ಸಹಾಯವಾಣಿ 08284/231239 ಹಾಗೂ ಅಂಬೇವಾಡಿ, ಬಡಕಾನಶಿರಡ, ಅಂಬಿಕಾನಗರ ಮತ್ತು ಆಲೂರು ಗ್ರಾ.ಪಂ ವ್ಯಾಪ್ತಿಯ ಶಾಖಾಧಿಕಾರಿ ಸಂಖ್ಯೆ 9480881778 ಹಾಗೂ 220 ಕೆ.ವಿ ಸ್ವೀಕರಣಾ ಕೇಂದ್ರ ಅಂಬೇವಾಡಿ ಗ್ರಿಡ್ ಸಹಾಯವಾಣಿ ಸಂಖ್ಯೆ 9448491710, ಆಫೀಸ್ ನಂ 08284/295666ಗೆ ಸಂಪರ್ಕಿಸಬಹುದು.
ಜೋಯಿಡಾ ತಾಲೂಕಿನ ಅವೇಡಾ, ಜಗಲಬೆಟ್, ಶಿಂಗರಗಾಂವ ಗ್ರಾಮೀಣ ಶಾಖೆಯ ಶಾಖಾಧಿಕಾರಿ 9480881778, ಗಣೇಶಗುಡಿಯ 110 ಕೆ.ವಿ ವಿತರಣಾ ಕೇಂದ್ರ ಮೊ.ನಂ 8277891912, ನಾಗೋಡ, ನಂದಿಗದ್ದೆ, ಅಣಶಿ, ಪ್ರಧಾನಿ, ಜೋಯಿಡಾ, ಕಾತೇಲಿ, ಉಳವಿ, ಅವೇಡಾ(ಇಳವಾ), ಗಂಗೋಡ ಗ್ರಾ.ಪಂ ವ್ಯಾಪ್ತಿಯ ಶಾಖಾಧಿಕಾರಿ ನಂ 9480881779, ಜೋಯಿಡಾದ 33 ಕೆ.ವಿ ವಿತರಣಾ ಕೇಂದ್ರದ ಮೊ.ನಂ 9480883822. ರಾಮನಗರ ಶಾಖೆಯ ರಾಮನಗರ, ಕ್ಯಾಸಲ್‌ರಾಕ್, ಬಜರಕೋಣಂಗ, ಅಖೇತಿ, ಅಸು ಗ್ರಾ.ಪಂ ವ್ಯಾಪ್ತಿಯ ಶಾಖಾಧಿಕಾರಿ ಮೊ.ನಂ 9980151401, ಅನಮೋಡ 110 ಕೆ.ವಿ ವಿತರಣಾ ಕೇಂದ್ರದ ಮೊ.ನಂ 8277891915ಗೆ ಸಂಪರ್ಕಿಸಬಹುದು.
ಗಾಳಿ-ಮಳೆಗೆ ವಿದ್ಯುತ್ ಕಂಬಗಳು ಧರೆಗುರುಳಿದ್ದರೆ, ವಿದ್ಯುತ್ ಲೈನ್ ಮೇಲೆ ಮರ-ಗಿಡಗಳು ಬಿದ್ದಿದ್ದರೆ, ವಿದ್ಯುತ್ ತಂತಿ ತುಂಡಾಗಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ಕೂಡಲೇ ಈ ಮೇಲಿನ ಸಹಾಯವಾಣಿಗಳ ಮೂಲಕ ಸಂಬಂಧಪಟ್ಟ ಶಾಖಾಧಿಕಾರಿಗಳ ಹಾಗೂ ಗ್ರಿಡ್‌ಗಳಿಗೆ ಸಂಪರ್ಕಿಸಬಹುದು. ಒಂದು ವೇಳೆ ಕಾರಣಾಂತರಗಳಿಂದ ಶಾಖಾಧಿಕಾರಿಗಳು ಸಂಪರ್ಕಕ್ಕೆ ಸಿಗದೇ ಇರುವ ಸಂದರ್ಭದಲ್ಲಿ ಹೆಸ್ಕಾಂನ 24x7 ಸಹಾಯವಾಣಿ ಸಂಖ್ಯೆ 1912ಗೆ ಅಥವಾ ಹೆಸ್ಕಾಂ ದಾಂಡೇಲಿ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರ ಮೊ.ನಂ 9448141725ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
PublicNext
11/06/2026 12:49 pm