ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸ್ಟೆಲ್ ವಿದ್ಯಾರ್ಥಿ ಸಾವಿನ ತನಿಖೆ ವಿಳಂಬ ಒಕ್ಕಲಿಗ ಸಮಾಜ ಆರೋಪ

ಸಿದ್ದಾಪುರ : ತಾಲೂಕಿನ ಕಾನಸೂರ್ ಹಾಸ್ಟೆಲ್ ನಲ್ಲಿ ನಡೆದ ವಿದ್ಯಾರ್ಥಿ ಸಾವಿನ ಪ್ರಕರಣದ ತನಿಖೆ ವಿಳಂಬವಾಗುತ್ತಿದೆ, ಯಾರ ಮೇಲೂ ಇದುವರೆಗೂ ಕ್ರಮವಾಗಿಲ್ಲ, ಘಟನೆಗೆ ನಡೆದಿಲ್ಲ ಎನ್ನುವ ರೀತಿಯಲ್ಲಿ ಅಧಿಕಾರಿಗಳು ಮೌನ ವಹಿಸಿದ್ದಾರೆ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಒಕ್ಕಲಿಗ ಸಮುದಾಯದ ಮುಖಂಡ ಎಂ.ಟಿ ಗೌಡ ಅವರು ಆರೋಪ ಮಾಡಿದ್ದಾರೆ ಮತ್ತು ಕೂಡಲೇ ತನಿಖೆಯಿಂದ ಸತ್ಯ ಹೊರ ಬರಲಿ ಎಂದು ಆಗ್ರಹ ಮಾಡಿದ್ದಾರೆ. ಇನ್ನೋರ್ವ ಮುಖಂಡ ಮೋಹನ ಗೌಡ ಮಾತನಾಡಿ ಘಟನೆಗೆ ಕಾರಣ ಏನು ಎನ್ನುವ ಸತ್ಯ ಕುಟುಂಬಕ್ಕೆ ತಿಳಿಯಬೇಕಿದೆ, ಸತ್ಯ ಸತ್ಯತೆ ಕೂಡಲೇ ತಿಳಿಸಿದರೆ ಕುಟುಂಬ ನೋವಿನಿಂದ ಹೊರಬರುತ್ತದೆ ಹಾಗಾಗಿ ಅಧಿಕಾರಿಗಳು ಕೂಡಲೇ ಆ ಘಟನೆಯ ಮಾಹಿತಿ ಹೊರ ತರಬೇಕು ಎಂದು ಒತ್ತಾಯ ಮಾಡಿದರು.

Edited By : PublicNext Desk
Kshetra Samachara

Kshetra Samachara

20/06/2026 05:02 pm

Cinque Terre

1.06 K

Cinque Terre

0

ಸಂಬಂಧಿತ ಸುದ್ದಿ