ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO : 'ಪರಮಾಪ್ತ ಎಂದ್ರೆ ನನ್ನ ವಿರುದ್ಧವೇ ಕೆಲಸ ಮಾಡ್ಬಹುದಾ!' ಜಮೀರ್ ಬೆಂಬಲಿಗರ ಎದುರೇ ಸಿದ್ದರಾಮಯ್ಯ ಆಕ್ರೋಶ ಸ್ಫೋಟ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಲ್ಪಸಂಖ್ಯಾತ ವರ್ಗದ ನಾಯಕ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಪರಮಾಪ್ತರಾಗಿದ್ದವರು.

ಆದರೆ ಈಗ ದೂರವಾಗಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ಸಿದ್ದರಾಮಯ್ಯನವರ ‘ಪರಮಾಪ್ತ’ ಎಂದೇ ಗುರುತಿಸಿಕೊಂಡಿದ್ದ ಜಮೀರ್ ಅಹ್ಮದ್ ಖಾನ್ ವಿರುದ್ಧವೇ ಈಗ ಸಿದ್ದರಾಮಯ್ಯ ಮುನಿಸು ಹೊರಹಾಕಿದ್ದಾರೆ.

‘ಅವನು ನನ್ನ ವಿರುದ್ಧವೇ ದಾವಣಗೆರೆಯಲ್ಲಿ ಕೆಲಸ ಮಾಡಿದ್ದಾನೆ’ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.

ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದು ಏಕೆ?

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಂಪುಟದಲ್ಲಿ ಜಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೋರಲು ಅವರ ಬೆಂಬಲಿಗರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಬಂದಿದ್ದರು.

ಆದರೆ, ಈ ಸಂದರ್ಭದಲ್ಲಿ ಬೆಂಬಲಿಗರ ಮನವಿ ಆಲಿಸುವ ಬದಲು ಸಿದ್ದರಾಮಯ್ಯನವರು ಅವರ ಮುಂದೆ ಜಮೀರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Edited By : Abhishek Kamoji
PublicNext

PublicNext

11/06/2026 04:14 pm

Cinque Terre

38.75 K

Cinque Terre

0

ಸಂಬಂಧಿತ ಸುದ್ದಿ