ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿ ಗಂಗಾಧರ ಮುತ್ತಗಿ ಕೆ-ಸಿಇಟಿ ಪರೀಕ್ಷೆಯಲ್ಲಿ ಸಾಧನೆ ಮಾಡಿ ರಾಜ್ಯದ ಗಮನ ಸೆಳೆದಿದ್ದಾರೆ. ಕೇವಲ ಒಂದು ಎಕರೆ ಜಮೀನು ಹೊಂದಿರುವ ರೈತ ಕುಟುಂಬದಿಂದ ಬಂದಿರುವ ಗಂಗಾಧರನ ಈ ಸಾಧನೆ ನಿಜಕ್ಕೂ ಹೆಮ್ಮೆಯ ವಿಷಯ. ಅವರು ವೆಟರ್ನರಿ ವಿಭಾಗದಲ್ಲಿ ಸ್ಪಾಟ್ 0.5 ರ‍್ಯಾಂಕ್ ಹಾಗೂ ಕೃಷಿ ವಿಭಾಗದಲ್ಲಿ ಸ್ಪಾಟ್ 3.5 ರ‍್ಯಾಂಕ್ ಗಳಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಂತ್ರಿಕ ಕಾರಣಗಳಿಂದ ಫಲಿತಾಂಶ ವಿಳಂಬವಾದಾಗಲೂ ಆತ್ಮವಿಶ್ವಾಸ ಕಳೆದುಕೊಳ್ಳದೆ, ಗಂಗಾಧರ ತಮ್ಮ ಪರಿಶ್ರಮದ ಮೂಲಕ ಯಶಸ್ಸಿನ ಮೆಟ್ಟಿಲು ಏರಿದ್ದಾರೆ. ಗಾರೆ ಕೆಲಸ ಮಾಡಿ ಕುಟುಂಬವನ್ನು ಸಲಹುವ ತಂದೆಯ ಶ್ರಮ, ರೈತನ ಬದುಕಿನ ಸಂಕಷ್ಟಗಳು ಹಾಗೂ ಮಗನ ಅಚಲ ಸಂಕಲ್ಪ ಒಂದಾದರೆ ಸಾಧನೆಯ ಶಿಖರವನ್ನು ತಲುಪಬಹುದು ಎಂಬುದಕ್ಕೆ ಗಂಗಾಧರ ಮುತ್ತಗಿ ಜೀವಂತ ಉದಾಹರಣೆ ಎಂದಿದ್ದಾರೆ.
ಗಂಗಾಧರನ ಈ ಸಾಧನೆ ಗ್ರಾಮೀಣ ಕರ್ನಾಟಕದ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ಕಠಿಣ ಪರಿಶ್ರಮ ಮತ್ತು ಸಂಕಲ್ಪದಿಂದ ಯಾವುದೇ ಅಡೆತಡೆಗಳನ್ನು ಮೀರಿ ನಿಲ್ಲಬಹುದು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ನಾಡಿನ ರೈತ ಸಮುದಾಯಕ್ಕೆ ಮತ್ತು ವಿಜಯಪುರ ಜಿಲ್ಲೆಗೆ ಹೆಮ್ಮೆ ತಂದಿರುವ ಈ ಯುವ ಪ್ರತಿಭೆಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಮುಂದಿನ ಶೈಕ್ಷಣಿಕ ಜೀವನ ಮತ್ತಷ್ಟು ಯಶಸ್ಸು, ಕೀರ್ತಿ ಹಾಗೂ ಸಾಧನೆಗಳಿಂದ ಕೂಡಿರಲಿ ಎಂದು ಹಾರೈಸಿದ್ದಾರೆ.
PublicNext
11/06/2026 06:51 pm
LOADING...