ಹಾವೇರಿ : ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ 200ಕ್ಕೂ ಹೆಚ್ಚು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮದ ಹೊರವಲಯದಲ್ಲಿರುವ ತಮ್ಮ ಜಮೀನುಗಳಿಗೆ ತಲುಪಲು ಸೂಕ್ತ ರಸ್ತೆ ಸಂಪರ್ಕ ಇಲ್ಲದಿರುವುದು ಅವರ ಆತಂಕಕ್ಕೆ ಮುಖ್ಯ ಕಾರಣವಾಗಿದೆ.
ಗ್ರಾಮದಿಂದ ಬ್ಯಾಡಗಿ ಸರಹದ್ದಿನ ಕಡೆ ಇರುವ ಸರ್ವೆ ನಂಬರ್ 338 ಹಾಗೂ 339 ರಂಗಾಪುರ ಗುಡ್ಡಕ್ಕೆ ತಲುಪಲು ಯಾವುದೇ ರಸ್ತೆಯಿಲ್ಲ. ಸಾಮಾನ್ಯವಾಗಿ ಬದುಗಳ ಮೂಲಕ ಸಾಗುತ್ತಿದ್ದ ರೈತರಿಗೆ, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲು ಈಗ ತಮ್ಮ ಜಮೀನು ತಲುಪುವುದೇ ದೊಡ್ಡ ಸವಾಲಾಗಿದೆ.
ಚಕ್ಕಡಿ, ಎತ್ತುಗಳಿರಲಿ ಬೈಕ್‌ನಲ್ಲಿ ಹೋಗುವುದು ಕಷ್ಟವಾಗಿದೆ. ರಂಗಪ್ಪನ ಗುಡ್ಡ ಸರ್ವೆ ನಂಬರ್ 327 ರಲ್ಲಿ ಸರ್ಕಾರ 12 ಎಕರೆಯಲ್ಲಿ ಆಶ್ರಯ ನಿವೇಶನ ನೀಡಿ 200 ಮನೆ ಕಟ್ಟಿಸಿತ್ತು. ಈ ಮನೆಗಳಿಗೂ ರಸ್ತೆ ಸಂಪರ್ಕ ಇಲ್ಲದ ಕಾರಣ ಫಲಾನುಭವಿಗಳು ಅಲ್ಲಿ ವಾಸಿಸದೆ ಮತ್ತೆ ಕದರಮಂಡಲಗಿ ಗ್ರಾಮಕ್ಕೆ ವಾಪಸ್ಸಾಗಿದ್ದಾರೆ. ಇದು ರಸ್ತೆ ಸಮಸ್ಯೆಯ ತೀವ್ರತೆಯನ್ನು ಎತ್ತಿ ತೋರಿಸುತ್ತದೆ.
PublicNext
11/06/2026 07:33 pm
LOADING...