ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಹಾವೇರಿ: 5 ಸಾವಿರ ರೂಪಾಯಿ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಕಾಗಿನೆಲೆ ಕಂದಾಯ ನಿರೀಕ್ಷಕ R.C. ದ್ಯಾಮನಗೌಡ್ರ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.

ಬ್ಯಾಡಗಿ ತಾಲೂಕು ಕುಮ್ಮೂರು ಕ್ರಾಸ್ ಬಳಿ ಲೋಕಾಯುಕ್ತರು ಅಧಿಕಾರಿಯನ್ನು ಟ್ರ್ಯಾಪ್ ಮಾಡಿದ್ದಾರೆ. ನಾಗರಾಜ್ ಕೆಂಪಲಿಂಗಣ್ಣನವರ್ ಹಾಗೂ ಸುಶೀಲಮ್ಮ ಶೇಖಪ್ಪ ಕೋಟಿಹಾಳ ಇವರ ಕೃಷಿ ಜಮೀನಿನ ಹಳೆ ಶರತ್ತು ದಾಖಲೆ ಕೊಡಲು ದ್ಯಾಮನಗೌಡ್ರ 12,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಮುಂಗಡವಾಗಿ 5,000 ಲಂಚದ ಹಣವನ್ನು ಸ್ವೀಕರಿಸುವ ವೇಳೆ ದ್ಯಾಮನಗೌಡ್ರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್‌ಪಿ ಮಧುಸೂದನ್ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

Edited By : Nagaraj Tulugeri
PublicNext

PublicNext

18/06/2026 08:25 pm

Cinque Terre

9.99 K

Cinque Terre

0

ಸಂಬಂಧಿತ ಸುದ್ದಿ