ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಾಡಳಿತ ಜೀವಂತ ಇದ್ದಾಗಲೇ ಮಹಿಳೆಗೆ ಮರಣ ಪ್ರಮಾಣಪತ್ರ ನೀಡಿ ಯಡವಟ್ಟು ಮಾಡಿದೆ. ಅತ್ತಿಗೇರಿ ಗ್ರಾಮದ ಶಿವಗಂಗವ್ವ ತಳಳ್ಳಿ ಎಂಬ ಮಹಿಳೆಗೆ ಮರಣ ಪತ್ರ ನೀಡುವ ಮೂಲಕ ತಾಲೂಕಾಡಳಿತ ಪ್ರಮಾದ ಎಸಗಿದೆ.
ಶಿವಗಂಗವ್ವ ತನ್ನ ತಾಯಿ ತಾಯಿ ಶಂಕ್ರವ್ವ ಮರಣ ಪತ್ರ ಕೇಳಲು ಹೋದಾಗ ಅಧಿಕಾರಿಗಳು ಶಂಕ್ರವ್ವನ ಬದಲು ಶಿವಗಂಗವ್ವನ ಹೆಸರಲ್ಲಿ ಮರಣ ಪ್ರಮಾಣಪತ್ರ ನೀಡಿದ್ದಾರೆ. ಅಧಿಕಾರಿಗಳ ತಪ್ಪಿಗೆ ಬಡಪಾಯಿ ಶಿವಗಂಗವ್ವ ಹಲವು ಸೌಲಭ್ಯಗಳಿಂದ ವಂಚಿತಳಾಗಿದ್ದಾಳೆ.
ಕಂದಾಯ ಅಧಿಕಾರಿಗಳು ಜೀವಂತ ಇದ್ದಾಗಲೇ ಮರಣಪತ್ರ ನೀಡುವ ಮೂಲಕ ತಾಯಿ ಬದಲು ಮಗಳಿಗೆ ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಮರಣ ಪ್ರಮಾಣಪತ್ರ ಅರ್ಜಿ ಸಲ್ಲಿಸಿದ್ದ ಮಗಳಿಗೆ ಮರಣ ಪ್ರಮಾಣ ಪತ್ರ ನೀಡುವ ಮೂಲಕ ಅಧಿಕಾರಿಗಳು ಪ್ರಮಾದ ಎಸಗಿದ್ದಾರೆ.
PublicNext
18/06/2026 08:37 am
LOADING...