ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾವಿ: ಸರಕಾರಿ ಕಚೇರಿಗಳಲ್ಲಿ ಐಡಿ ಕಾರ್ಡ್ ಕಡ್ಡಾಯ, ನಿಯಮ ಗಾಳಿಗೆ ತೂರಿದ ಸಿಬ್ಬಂದಿ, ಐಡಿ ಕಾರ್ಡ್ ಮಾಯ

ಶಿಗ್ಗಾವಿ: ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಿಕೊಂಡು ಕೆಲಸ ನಿರ್ವಹಿಸಬೇಕು ಎಂದು ಸರಕಾರ ಸ್ಪಷ್ಟ ಆದೇಶ ಹೊರಡಿಸಿದೆ. ಆದರೆ ಶಿಗ್ಗಾವಿಯ ಸರ್ಕಾರಿ ಕಚೇರಿಗಳಲ್ಲಿ ಕೆಲಸ ನಿರ್ವಹಿಸುವ ಬಹುತೇಕ ನೌಕರರು ಈ ಆದೇಶವನ್ನು ಗಾಳಿಗೆ ತೂರಿ ಕೆಲಸ ಮಾಡುತ್ತಿದ್ದು, ಈ ಕುರಿತು ಹಲವು ದೂರುಗಳು ಕೇಳಿಬರುತ್ತಿವೆ.

ಹೌದು ಶಿಗ್ಗಾವಿ ತಾಲೂಕಿನ ವಿವಿಧ ಸರಕಾರಿ ಕಚೇರಿಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಗುರುತಿನ ಚೀಟಿ ಇಲ್ಲದೆ ಕೆಲಸ ನಿರ್ವಹಿಸುತ್ತಿದ್ದು ಸರಕಾರದ ಆದೇಶಕ್ಕೆ ಕಿಂಚಿತ್ತು ಕಿಮ್ಮತ್ತು ನೀಡುತ್ತಿಲ್ಲ. ಮಾಧ್ಯಮದವರು ಈ ಬಗ್ಗೆ ಪ್ರಶ್ನೆ ಮಾಡಿದರೆ ಐಡಿ ಕಾರ್ಡ್ ಬ್ಯಾಗಿನಲ್ಲಿದೆ, ಮನೆಯಲ್ಲಿ ಮರೆತು ಬಂದಿದ್ದೇನೆ ಎಂಬ ಹಾರಿಕೆ ಉತ್ತರ ನೀಡುತ್ತಿದ್ದು ಮೇಲಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರಾ ಕಾದು ನೋಡಬೇಕಾಗಿದೆ

ರಮೇಶ್ ಸೋಮಕ್ಕನವರ್, ಪಬ್ಲಿಕ್ ನೆಕ್ಸ್ಟ್

Edited By :
PublicNext

PublicNext

12/06/2026 12:56 pm

Cinque Terre

7.66 K

Cinque Terre

0

ಸಂಬಂಧಿತ ಸುದ್ದಿ