ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ : ತುಂಗಭದ್ರಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸ್ ದಾಳಿ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನಾದ್ಯಂತ ತುಂಗಭದ್ರಾ ನದಿ ಪಾತ್ರದಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ, ಜೂನ್.12 ರ ಶುಕ್ರವಾರ ತುಂಗಭದ್ರಾ ನದಿ ಪಾತ್ರದ ನಿಟಪಳ್ಳಿ, ಚಂದಾಪುರ, ಬೆಲೂರು, ಐರಣಿ, ಹರನಗಿರಿ, ಕೋಟಿಹಾಳ, ಚಿಕ್ಕಕುರುವತ್ತಿ ಗ್ರಾಮಗಳ ಒಟ್ಟು 08 ಸ್ಥಳಗಳಲ್ಲಿ ಬೆಳಗಿನ ಜಾವ ಏಕ ಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಸುಮಾರು 17,779 ಮೆಟ್ರಿಕ್ ಟನ್ ಗಳಷ್ಟು ಮರಳು, 2 ಜೆ.ಸಿ.ಬಿ ವಾಹನ ಹಾಗೂ 4 ತೆಪ್ಪಗಳನ್ನು ವಶಪಡಿಸಿಕೊಂಡು .

ಮುಂದಿನ ಕ್ರಮಕ್ಕಾಗಿ ಪ್ರಕರಣವನ್ನು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಲಾಗಿದೆ. ಎಮ್ ಎಸ್ ಕೌಲಾಪುರೆ, ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ ದಾವಣಗೆರೆ ರವರ ಮಾರ್ಗದರ್ಶನದಲ್ಲಿ, ಮಧುಸೂದನ್ ಸಿ. ಡಿವೈಎಸ್‌ಪಿ ಕರ್ನಾಟಕ ಲೋಕಾಯುಕ್ತ ರವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ವರದಿ :ಲೋಕೇಶ್ ಸುಣಗಾರ ಪಬ್ಲಿಕ್ ನೆಕ್ಸ್ಟ್ ಹಾನಗಲ್

Edited By : Vinayak Patil
PublicNext

PublicNext

12/06/2026 07:42 pm

Cinque Terre

14.41 K

Cinque Terre

0

ಸಂಬಂಧಿತ ಸುದ್ದಿ