ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಲವ್ ಜಿಹಾದ್ ಪ್ರಕರಣ - ಕರ್ತವ್ಯ ಲೋಪದ ಹಿನ್ನೆಲೆ ಸಿಪಿಐ ಲೋಹಾರ್ ಅಮಾನತು!

ಧಾರವಾಡ: ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಡೆದ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಹಿನ್ನೆಲೆ ಗರಗ ಸಿಪಿಐ ಶಿವಯೋಗಿ ಲೋಹಾರ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಗರಗ ಗ್ರಾಮದ ಪೂರ್ಣಿಮಾ ವಡ್ಡರ ಅವರನ್ನು ಹನುಮನಕೊಪ್ಪ ಗ್ರಾಮದ ನಹೀಮ್ ಬೇಗ್ ಹಾಗೂ ಸೋಹಿಲ್ ಮುಲ್ಲಾ ಎಂಬ ಮುಸ್ಲಿಂ ಯುವಕರು ಲವ್ ಜಿಹಾದ್‌ಗೆ ಬಳಕೆ ಮಾಡಿ ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಿದ್ದರು. ಈ ಹಿಂದೆ ಇದೇ ವಿಚಾರವಾಗಿ ಪೊಲೀಸರೇ ರಾಜೀ ಸಂದಾನ ನಡೆಸಿದ್ದರು ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ದೂರು ದಾಖಲಾಗಿ ಕೆಲ ದಿನ ಕಳೆದರೂ ಪೊಲೀಸರು ಆರೋಪಿಗಳನ್ನು ಬಂಧಿಸಿರಲಿಲ್ಲ. ಈ ಸಂಬಂಧ ಭಾರೀ ವಿರೋಧ ವ್ಯಕ್ತವಾಗಿತ್ತು. ಆ ನಂತರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಈ ಸಂಬಂಧ ಪೊಲೀಸರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ಗರಗ ಗ್ರಾಮದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ್ದರು. ಈ ಲವ್ ಜಿಹಾದ್ ಪ್ರಕರಣದ ಕೂಲಂಕುಶ ವಿಚಾರಣೆ ನಡೆಸಿರುವ ಎಸ್‌ಪಿ ಅವರು ಕರ್ತವ್ಯ ಲೋಪದ ಹಿನ್ನೆಲೆ ಗರಗ ಸರ್ಕಲ್ ಸಿಪಿಐ ಶಿವಯೋಗಿ ಲೋಹಾರ್ ಅವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ. ಒಟ್ಟಾರೆ ಈ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ ಒಬ್ಬರ ತಲೆದಂಡವಾದಂತಾಗಿದೆ.

Edited By : Abhishek Kamoji
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

13/06/2026 10:58 am

Cinque Terre

16.83 K

Cinque Terre

10

ಸಂಬಂಧಿತ ಸುದ್ದಿ