ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಂಪನಿಗೆ ಮೋಸ ! ಮ್ಯಾನೇಜರ್ ಸೇರಿ ಇತರೆ 3 ಜನ ನೌಕರರ ಮೇಲೆ ಎಫ್‌.ಐ.ಆರ್

ಹುಬ್ಬಳ್ಳಿ: 10 ಲಕ್ಷ ಮೌಲ್ಯದ 153 ಪೇಂಟ್ ಬಕೇಟ್‌ಗಳನ್ನು ಎಲ್ಲಿಗೋ ಸಾಗಿಸಿಯೋ ಅಥವಾ ಮಾರಾಟ ಮಾಡಿರುವುದರಿಂದಲೋ ಸ್ಟಾಕ್ ಕಡಿಮೆಯಾಗುವಂತೆ ಮಾಡಿ ಮೋಸ ಮಾಡಿದ ಆರೋಪದ ಮೇಲೆ ಮ್ಯಾನೇಜರ್ ಸೇರಿ ನಾಲ್ವರ ವಿರುದ್ಧ ಕಂಪನಿಯವರು ಪ್ರಕರಣ ದಾಖಲಿಸಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಕೊಟಗೊಂಡಹುಣಸಿ ಗ್ರಾಮದ ವ್ಯಾಪ್ತಿಯ ಕುಂದಗೋಳ ಕ್ರಾಸ್ ಹತ್ತಿರ ಇರುವ ಎಟಿಸಿ ಗೋಡೌನ್ ಹಿಂಭಾಗದಲ್ಲಿರುವ ಬರ್ಜರ್ ಪೇಂಟ್ಸ್ ಗೋಡೌನ್‌ನಲ್ಲಿ ಸ್ಟಾಕ್ ಇದ್ದ ಕಂಪನಿಯ 153 ಪೇಂಟ್ ಬಕೇಟ್‌ಗಳನ್ನು ಮ್ಯಾನೇಜರ್ ರವಿಕೃಷ್ಣಗೌಡ, ಸೂಪರ್‌ವೈಸರ್‌ಗಳಾದ ರಾಜು, ನಾಗರಾಜ, ರಾಜಪ್ಪ ಎಂಬುವರು ಸ್ಟಾಕ್ ಕಡಿಮೆಯಾಗುವಂತೆ ಮಾಡಿ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ

ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Edited By : Nagaraj Tulugeri
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

12/06/2026 10:25 pm

Cinque Terre

14.64 K

Cinque Terre

0

ಸಂಬಂಧಿತ ಸುದ್ದಿ