ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಶತಾಯುಷಿಗೆ ಸನಿಹದಲ್ಲಿದ್ದ 99 ವರ್ಷದ ವೃದ್ಧೆ ಬಾವಿಗೆ ಬಿದ್ದು ದುರ್ಮರಣ

ಮೂಡುಬಿದಿರೆ: ಶತಾಯುಷಿಗೆ ಸಮೀಪದಲ್ಲಿದ್ದ ವೃದ್ಧೆಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಮೂಡುಬಿದಿರೆ ತಾಲೂಕಿನ ಮಾರ್ಪಾಡಿ ಗ್ರಾಮದ ಒಂಟಿಕಟ್ಟೆಯಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.

ಮೃತರನ್ನು ಒಂಟಿಕಟ್ಟೆಯ ದೇವಿ ಪ್ರಸಾದ್ ನಿಲಯದ ದಿ. ತನಿಯ ಪೂಜಾರಿ ಅವರ ಪತ್ನಿ ಕಮಲ (99) ಎಂದು ಗುರುತಿಸಲಾಗಿದೆ. ಉತ್ತಮ ಆರೋಗ್ಯ ಹೊಂದಿದ್ದ ಕಮಲ ಅವರು ಪ್ರತಿದಿನ ಮನೆಯ ಸಮೀಪದ ಬಾವಿಗೆ ಇಣುಕಿ ನೋಡುವ ಅಭ್ಯಾಸ ಹೊಂದಿದ್ದರು.

ಶನಿವಾರ ಬೆಳಿಗ್ಗೆಯೂ ಎಂದಿನಂತೆ ಬಾವಿಗೆ ಇಣುಕಿ ನೋಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದಿದ್ದಾರೆ. ಪರಿಣಾಮ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಮೂಡುಬಿದಿರೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದರು. ಮೃತರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Edited By :
Kshetra Samachara

Kshetra Samachara

13/06/2026 07:03 pm

Cinque Terre

504

Cinque Terre

0

ಸಂಬಂಧಿತ ಸುದ್ದಿ