ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಕಷ್ಟದಲ್ಲಿದ್ದ 14 ಭಾರತೀಯ ನಾವಿಕರು ಸುರಕ್ಷಿತ : ಅಮೆರಿಕ-ಭಾರತ ನೌಕಾಪಡೆಗಳಿಂದ ಮಹಾ ರಕ್ಷಣೆ.!

ಒಮಾನ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೂ ಅಮೆರಿಕ ಮತ್ತು ಭಾರತೀಯ ನೌಕಾಪಡೆಗಳು ಜಂಟಿಯಾಗಿ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ 14 ಭಾರತೀಯ ನಾವಿಕರ ಜೀವ ಉಳಿದಿದೆ. ಒಮಾನ್ ಕರಾವಳಿಯ ಸಮೀಪ ತಾಂತ್ರಿಕ ದೋಷದಿಂದ ಮುಳುಗಲಾರಂಭಿಸಿದ್ದ ವಾಣಿಜ್ಯ ‘ಧೋ’ ಹಡಗಿನಿಂದ ನಾವಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ರಾಸ್ ಅಲ್ ಹಡ್‌ನಿಂದ ಸುಮಾರು 80 ನಾಟಿಕಲ್ ಮೈಲು ದೂರದಲ್ಲಿ ಹಡಗು ಸಂಕಷ್ಟಕ್ಕೆ ಸಿಲುಕಿರುವ ಮಾಹಿತಿ ಲಭಿಸುತ್ತಿದ್ದಂತೆಯೇ ಅಮೆರಿಕ ನೌಕಾಪಡೆಯ ಪಿ-8 ಕಡಲ ಗಸ್ತು ವಿಮಾನ ತುರ್ತು ಕಾರ್ಯಾಚರಣೆಗೆ ಇಳಿದಿತು. ವಿಮಾನದಿಂದ ಜೀವ ರಕ್ಷಕ ದೋಣಿಯನ್ನು ಸಮುದ್ರಕ್ಕೆ ಇಳಿಸಲಾಗಿದ್ದು, ನಾವಿಕರು ಅದರಲ್ಲಿ ಆಶ್ರಯ ಪಡೆದರು.

ಬಳಿಕ ಯುಎಸ್ ನೌಕಾಪಡೆಯ ಮನವಿಗೆ ಸ್ಪಂದಿಸಿದ ‘ಎಂವಿ ಜಬಲ್ ಅಲಿ 9’ ವ್ಯಾಪಾರಿ ಹಡಗು ಸ್ಥಳಕ್ಕೆ ಧಾವಿಸಿತು. ಭಾರತೀಯ ಹಾಗೂ ಅಮೆರಿಕ ನೌಕಾಪಡೆಗಳ ಸಮನ್ವಯದೊಂದಿಗೆ ಎಲ್ಲಾ 14 ನಾವಿಕರನ್ನು ಸುರಕ್ಷಿತವಾಗಿ ಹಡಗಿಗೆ ಸ್ಥಳಾಂತರಿಸಲಾಯಿತು.

ಹಾರ್ಮುಜ್ ಜಲಸಂಧಿಯ ಸುತ್ತ ಭದ್ರತಾ ಸವಾಲುಗಳು ಹೆಚ್ಚಿರುವ ಸಮಯದಲ್ಲೇ ನಡೆದ ಈ ಕಾರ್ಯಾಚರಣೆ ಮಾನವೀಯತೆ ಹಾಗೂ ಅಂತರರಾಷ್ಟ್ರೀಯ ಸಹಕಾರದ ಉತ್ತಮ ಉದಾಹರಣೆಯಾಗಿದೆ. ನೌಕಾಪಡೆಗಳ ಕ್ಷಿಪ್ರ ಸ್ಪಂದನೆಯಿಂದ 14 ಭಾರತೀಯ ಕುಟುಂಬಗಳ ಆತಂಕ ದೂರವಾಗಿದ್ದು, ಈ ಸಾಹಸಮಯ ರಕ್ಷಣಾ ಕಾರ್ಯಾಚರಣೆ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

Edited By :
PublicNext

PublicNext

14/06/2026 03:31 pm

Cinque Terre

7.44 K

Cinque Terre

0