ಚಾಮರಾಜನಗರ : ಅಮಾವಾಸ್ಯೆ ಹಾಗೂ ಭಾನುವಾರ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹದೇಶ್ವರಬೆಟ್ಟಕ್ಕೆ ಭಕ್ತರು ಆಗಮಿಸಿ ಪವಾಡ ಪುರುಷ ಮಾದಪ್ಪನ ದರ್ಶನ ಪಡೆದು ತಮ್ಮ ಹರಕೆ ತೀರಿಸಿದರು.
ಮಹದೇಶ್ವರಬೆಟ್ಟಕ್ಕೆ ಆಗಮಿಸಿದ ಭಕ್ತರು ಮಾದಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ,
ಹುಲಿವಾಹನ, ರುದ್ರಾಕ್ಷಿ ವಾಹನ ಎಳೆದು ಹಾಗೂ ಬೆಳ್ಳಿಯ ದಂಡ ಹೊತ್ತು ದೇಗುಲದ ಸುತ್ತ ಪ್ರದಕ್ಷಣೆ ಹಾಕಿ ಹರಕೆ ತೀರಿಸಿದರು.
ಮಾದಪ್ಪನ ದರ್ಶನಕ್ಕೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರಿಗೆ ದೇವರ ದರ್ಶನಕ್ಕೆ ಅನುಕೂಲವಾಗುವಂತೆ ಪ್ರಾಧಿಕಾರದ ವತಿಯಿಂದ ಸೂಕ್ತ ವ್ಯವಸ್ಥೆಮಾಡಲಾಗಿತ್ತು. ಹಾಗೂ ಭಕ್ತರಿಗೆ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿತ್ತು.
Kshetra Samachara
14/06/2026 07:38 pm
LOADING...