ಚಾಮರಾಜನಗರ : ಚಾಮರಾಜನಗರ ಗಡಿಭಾಗದ ಆಸನೂರು ಬಳಿ ರಸ್ತೆಬದಿ ನಿಂತಿದ್ದ ಕಾಡಾನೆಯೊಂದಿಗೆ ಫೋಟೋ, ವಿಡಿಯೋ ತೆಗೆದುಕೊಳ್ಳಲು ಬೈಕ್ ಸವಾರರು ಹುಚ್ಚಾಟ ನಡೆಸಿದ್ದಾರೆ. ಹೆದ್ದಾರಿ ಬದಿಯಲ್ಲಿ ಆಹಾರ ಹುಡುಕುತ್ತಿದ್ದ ಆನೆಯ ಸಮೀಪವೇ ನಿಂತು ಕೆಲವರು ಫೋಟೋ ತೆಗೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಆನೆ ರಸ್ತೆಬದಿಯಲ್ಲಿ ಸಂಚರಿಸುತ್ತಿದ್ದು, ಕಬ್ಬು ತುಂಬಿದ ಲಾರಿಗಳನ್ನು ಹಾಗೂ ತರಕಾರಿ ತುಂಬಿದ ವಾಹನಗಳನ್ನು ತಡೆದು ವಾಹನ ಸವಾರರಿಗೆ ಆಗಿಂದಾಗ್ಗೆ ಆತಂಕ ಹುಟ್ಟಿಸಿವೆ. ಈ ಹಿನ್ನೆಲೆಯಲ್ಲಿ ಯಾರೂ ವಾಹನಗಳಿಂದ ಇಳಿದು ರಸ್ತೆಯಲ್ಲಿ ನಿಂತು ಆನೆಯ ಫೋಟೋ ತೆಗೆಯುವ ಹುಚ್ಚಾಟ ನಡೆಸಬಾರದೆಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
Kshetra Samachara
17/06/2026 12:06 pm
LOADING...