ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಳೆಯಿಂದ ಕೊಚ್ಚಿ ಹೋದ ವೆಂಕಟಾಪುರ–ಮಾಚೇನಹಳ್ಳಿ ಸಂಪರ್ಕ ಸೇತುವೆ;ದುರಂತ ಸೇತುವೆ ದಾಟಲು ಗ್ರಾಮಸ್ಥರ ಹರಸಾಹಸ

ಮೊಳಕಾಲ್ಮುರು:ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಮೊಳಕಾಲ್ಮುರು ತಾಲೂಕಿನ ವೆಂಕಟಾಪುರ ಮತ್ತು ಮಾಚೇನಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿ ಹೋಗಿದೆ. ಪರಿಣಾಮ ಎರಡು ಗ್ರಾಮಗಳ ನಡುವಿನ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ಗ್ರಾಮಸ್ಥರ ಸಂಚಾರಕ್ಕೆ ತೀವ್ರ ತೊಂದರೆ ಅನುಭಸುವಂತಾಗಿದೆ.

ಎರಡು ದಶಕಗಳ ಹಿಂದೆ ಈ ಸೇತುವೆ ದಾಟಲು ಹೋಗಿ 23ಜನರು ಜಲಸಮಾಧಿಯಾಗಿದ್ದರು,ಈಗ ಮತ್ತದೇ ಸೇತುವೆ ಕೊಚ್ಚಿ ಹೋಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.ಇನ್ನೂ ಈ ಸೇತುವೆ ಕೊಚ್ಚಿ ಹೋದ ಪರಿಣಾಮ ಗ್ರಾಮಗಳ ಶಾಲಾ ವಿದ್ಯಾರ್ಥಿಗಳು, ರೈತರು ಹಾಗೂ ನಿತ್ಯ ಕೆಲಸಗಳಿಗೆ ತೆರಳುವ ಜನರು ಪರ್ಯಾಯ ಮಾರ್ಗಗಳ ಮೂಲಕ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕೆಲವರು ಅಪಾಯದ ನಡುವೆಯೂ ನೀರು ಹರಿಯುವ ಪ್ರದೇಶವನ್ನು ದಾಟಿ ಹೋಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಸೇತುವೆ ಹಾನಿಗೊಳಗಾದ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈಗೊಂಡು ಹೊಸ ಸೇತುವೆ ನಿರ್ಮಾಣ ಮಾಡಬೇಕು ಹಾಗೂ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು ಎಂಬುವುದು ಇಲ್ಲಿನ ಗ್ರಾಮಸ್ಥರ ಆಗ್ರಹವಾಗಿದೆ.

Edited By : PublicNext Desk
Kshetra Samachara

Kshetra Samachara

14/06/2026 08:01 pm

Cinque Terre

3.08 K

Cinque Terre

0

ಸಂಬಂಧಿತ ಸುದ್ದಿ