ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಶೆಡ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 182 ಕ್ವಿಂಟಾಲ್ ಪಡಿತರ ಅಕ್ಕಿ ವಶ

ಚಿತ್ರದುರ್ಗ: ಚಿತ್ರದುರ್ಗ ನಗರದ ಶೆಡ್ ಒಂದರಲ್ಲಿ 180 ಬ್ಯಾಗ್ ಗಳಲ್ಲಿ ಸಂಗ್ರಹಿಸಿದ್ದ 182.4 ಕ್ವಿಂಟಾಲ್ ಪಡಿತರ ಅಕ್ಕಿ ವಶಕ್ಕೆ ಪಡೆಲಾಗಿದೆ.

ನಗರದ ಹಿಮ್ಮತ್ ನಗರದ ಶೆಡ್ ನಲ್ಲಿ ‌ಅಕ್ರಮವಾಗಿ ಪಡಿತರ ಅಕ್ಕಿಯನ್ನ ನಗರದ ಸಾದತ್ ಎಂಬವರು ಸಂಗ್ರಹಿಸಿದ್ದರು ಎಂದು ತಿಳಿದು ಬಂದಿದೆ.

ಇದೇ ಶೆಡ್ ನಲ್ಲಿ ಇದು ಮೂರನೇ ಬಾರಿ ಅಕ್ರಮ ಪಡಿತರ ಅಕ್ಕಿಯನ್ನ ವಶಕ್ಕೆ ಪಡೆದಿದ್ದಾರೆ. ಆಹಾರ ನಿರೀಕ್ಷಕಿ ರಚನಾ ಇವರ ದೂರು ಆಧರಿಸಿ ದಾಳಿ ಮಾಡಲಾಗಿದ್ದು ಅಕ್ರಮವಾಗಿ ಶೇಖರಣೆ ಮಾಡಿದ್ದ ಪಡಿತರ ಅಕ್ಕಿಯನ್ನ ವಶಕ್ಕೆ ಪಡೆಯಲಾಗಿದೆ.

ಚಿತ್ರದುರ್ಗ ನಗರ ಠಾಣೆಯಲ್ಲಿ ಎಪ್ ಐಆರ್ ದಾಖಲಾಗಿದೆ.

Edited By :
PublicNext

PublicNext

14/06/2026 11:48 am

Cinque Terre

11.98 K

Cinque Terre

0

ಸಂಬಂಧಿತ ಸುದ್ದಿ