ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸದುರ್ಗ ಪೊಲೀಸರ ಮಿಂಚಿನ ಕಾರ್ಯಾಚರಣೆ: ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ

ಚಿತ್ರದುರ್ಗ: ಹೊಸದುರ್ಗ ಪೊಲೀಸರ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಅಂತರ್ ಜಿಲ್ಲಾ ಖತರ್ನಾಕ್ ಬೈಕ್ ಕಳ್ಳರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರಿಂದ 2.80 ಸಾವಿರ ಮೌಲ್ಯದ ನಾಲ್ಕು ಬೈಕ್‌ಗಳನ್ನ ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿಗಳನ್ನ ಶಶಿಕುಮಾರ್ ಹಾಗೂ ದಿನೇಶ್@ ಕೂನ ಎಂದು ಗುರುತಿಸಲಾಗಿದೆ. ಬಂಧಿತರು ಕಡೂರು ತಾಲ್ಲೂಕಿನ ಕಾವಲುಹಟ್ಟಿ ಗ್ರಾಮದ ಮೂಲದವರು ಎಂದು ಗುರುತಿಸಲಾಗಿದೆ. ಹೊಸದುರ್ಗ ನಗರದ ಟಿಬಿ ಸರ್ಕಲ್ ಬಳಿ ಬೈಕ್ ಕದ್ದು ಎಸ್ಕೇಪ್ ಆಗಿದ್ದ ಆರೋಪಿಗಳು. ಹೊಸದುರ್ಗ ಸಿಪಿಐ ರಮೇಶ್ ಹಾಗೂ ಪಿಎಸ್ಐ ಶ್ರೀಶೈಲ ನೇತೃತ್ವದಲ್ಲಿ ಆರೋಪಿಗಳ ಬಂಧಿಸಲಾಗಿದೆ. ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

19/06/2026 10:37 am

Cinque Terre

2.92 K

Cinque Terre

0

ಸಂಬಂಧಿತ ಸುದ್ದಿ