ತ್ರದುರ್ಗ: ಇದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗ ಅರಣ್ಯ ಪ್ರದೇಶ. ಕಲ್ಲವ್ವ ನಾಗತಿಹಳ್ಳಿ ಸರ್ಕಾರಿ ಅರಣ್ಯ ಭೂಮಿಯ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ. ಇದೇ ಇದೇ ಕಾರಣಕ್ಕೆ ಅಂದಾಜು ೨೦ ಎಕರೆ ಅರಣ್ಯ ಪ್ರದೇಶ ನಾಶ ಮಾಡಿದ್ದಾರೆ. ಸರ್ವೆ ನಂಬರ್ 5 ರಲ್ಲಿ ಗಿಡ-ಮರ ಕಡಿದು ಹಾಕಿದ್ದು, ಒತ್ತುವರಿ ಯತ್ನ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಪಕ್ಕದ ಗ್ರಾಮದ ಗೋಪಾಲ್ ನಾಯ್ಕ್ ಹಾಗೂ ಶ್ರೀನಿವಾಸ್ ಎಂಬ ಇಬ್ಬರು ವ್ಯಕ್ತಿಗಳು ರಾತ್ರೋ ರಾತ್ರಿ ಸರ್ಕಾರಿ ಅರಣ್ಯಕ್ಕೆ ನುಗ್ಗಿ ಬೃಹತ್ ಗಾತ್ರದ ಮರಗಳನ್ನು ಕತ್ತರಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಜೆಸಿಬಿ ಹಾಗೂ ಟ್ರಾಕ್ಟರ್ ಬಳಸಿ ಸರ್ಕಾರಿ ಹುಲುಬನಿ ಕರಾಬು ಭೂಮಿ ನಾಶ ಮಾಡಿದ್ದು, ಇದರಿಂದ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಠ ಉಂಟಾಗಿದೆ. ಅಲ್ಲದೆ ಅರಣ್ಯ ಪ್ರದೇಶದಲ್ಲಿ ಬೃಹತ್ ಗಾತ್ರದಲ್ಲಿ ಬೆಳೆದು ನಿಂತಿದ್ದ ಅಕೇಷಿಯ, ನೀಲಗಿರಿ, ಬೇವು, ಹೊಂಗೆ ಸೇರಿ ಹಲವು ಜಾತಿಯ ಮರಗಳನ್ನ ಕಡಿದು ಉರುಳಿಸಿದ್ದು ಸ್ಥಳೀಯ ರೈತರ ಆಕ್ರೋಶಕ್ಕೂ ಕಾರಣವಾಗಿದೆ. ಇಷ್ಠಾದ್ರೂ ಕೂಡಾ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮಚ್ಚಿ ಕುಳಿತಿದ್ದಾರೆ ಅನ್ನೋ ಆರೋಪ ಕೂಡಾ ಕೇಳಿ ಬಂದಿದೆ. ಅರಣ್ಯ ನಾಶ ಮಾಡುವ ವೇಳೆ ಹತ್ತಾರೂ ಬಾರಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ರೂ ಕೂಡಾ ಇತ್ತ ಯಾರೂ ಸುಳಿದಿಲ್ಲ ಅಂತ ಸ್ಥಳೀಯ ರೈತರು ಆಕ್ರೋಶ ಹೊರ ಹಾಕಿದ್ದಾರೆ.
ವಾ.ಓ೨: ಇನ್ನೂ ಇಷ್ಠೇ ಅಲ್ಲದೇ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಾ ಭೂ ಒತ್ತುವರಿದಾರರ ಜೊತೆ ಶಾಮೀಲು ಆಗಿದ್ದು ಅರಣ್ಯ ನಾಶಕ್ಕೆ ಕುಮ್ಮಕ್ಕು ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಸರ್ಕಾರ ಅನುದಾನದಲ್ಲಿ ಬೆಳೆಸಿದ್ದ ನೆಡತೋಪು ಸಂಪೂರ್ಣ ನಾಶವಾಗಿದ್ದು, ಫಾರೆಸ್ಟ್ ಇಲಾಖೆಯ ನಿರ್ಲಕ್ಷ್ಯ ಕೂಡಾ ಎದ್ದು ಕಾಣುತ್ತಿದೆ. ಅಲ್ಲದೇ ಅರಣ್ಯನಾಶದಿಂದ ಚಿರತೆ, ಕರಡಿ, ನವಿಲು ಸೇರಿದಂತೆ ಹಲವು ಪ್ರಾಣಿಗಳು ನಾಡಿನತ್ತ ಬರುತ್ತಿವೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಚಿತ್ರದುರ್ಗ ಡಿ.ಎಪ್.ಓ ಗೋಪ್ಯಾನಾಯ್ಕ್ ಮಾತನಾಡಿ ಸರ್ಕಾರಿ ಅರಣ್ಯ ನಾಶ ಮಾಡಿರುವು ಗಮನಕ್ಕೆ ಬಂದಿದ್ದು ಕೂಡಾ ಸ್ಥಳಕ್ಕೆ ನಮ್ಮ ಸಿಬ್ಬಂದಿಗಳು ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಸರ್ಕಾರಿ ಭೂಮಿ ಒತ್ತುವರಿ ಮಾಡುತ್ತಿದ್ದ ಶ್ರೀನಿವಾಸ್, ಗೋಪಾಲ್ ನಾಯ್ಕ್, ಹಾಗೂ ಕುಮ್ಮಕ್ಕು ನೀಡಿದ್ದ ಆದಿಶೇಷ್ ಎಂಬವವರ ವಿರುದ್ದ ಕೇಸ್ ದಾಖಲು ಮಾಡಿದ್ದೇವೆ ಎನ್ನುತ್ತಾರೆ.
ವಾ.ಓ೩: ಒಟ್ಟಾರೇ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹತ್ತಾರೂ ಎಕರೆ ಅರಣ್ಯ ಭೂಮಿ ನಾಶವಾಗಿದ್ದು, ಸರ್ಕಾರದ ಲಕ್ಷಾಂತರ ರೂಪಾಯಿ ಅನುದಾನ ನೀರಲ್ಲಿ ಹೋಮ ಮಾಡಿದಂತಾಗಿದೆ. ಈ ಕುರಿತು ಸೂಕ್ತ ತನಿಖೆ ನಡೆಸಿ ಅರಣ್ಯ ನಾಶಕ್ಕೆ ಕುಮ್ಮಕ್ಕು ಕೊಟ್ಟ ಅಧಿಕಾರಿಗಳು ತಕ್ಕ ಶಿಕ್ಷೆ ಆಗ್ಬೇಕು ಅನ್ನೋದು ಸ್ಥಳೀಯ ರೈತರ ಒತ್ತಾಯವಾಗಿದೆ
PublicNext
17/06/2026 02:02 pm