ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ರಕ್ಷಣೆ ಕೋರಿ ಎಸ್ಪಿ ಕಚೇರಿ ಮೆಟ್ಟಿಲು ಹತ್ತಿದ ಯುವ ಪ್ರೇಮಿಗಳು

ಚಿತ್ರದುರ್ಗ: BSC ಓದುತ್ತಿದ್ದ ಯುವಕ-ಯುವತಿ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದು, ಪೋಷಕರಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ.

ಚಿತ್ರದುರ್ಗ ತಾಲೂಕಿನ ಚನ್ನಯ್ಯನಹಟ್ಟಿ ಮೋಹನ್ ಹಾಗೂ ಚಿಕ್ಕಪ್ಪನಹಳ್ಳಿ ಗ್ರಾಮದ ಮಧುಶ್ರೀ ದಾವಣಗೆರೆಯಲ್ಲಿ BSC ದ್ವಿತಿಯ ವರ್ಷ ಓದುತ್ತಿದ್ದು, ಪರಸ್ಪರ ಪ್ರೀತಿಸಿ ವಿವಾಹವಾಗಿದ್ದಾರೆ. ಸದ್ಯ ಅಂತರ್ಜಾತಿಯ ಕಾರಣಕ್ಕೆ ಯುವತಿ ಮಧುಶ್ರೀ ಕುಟುಂಬಸ್ಥರಿಂದ ವಿರೋಧ ವ್ಯಕ್ತವಾಗಿದೆ. ಪ್ರಸ್ತುತ ತನ್ನದೇ ಆಟೋಮೊಬೈಲ್‌ ಶಾಪ್ ಇಟ್ಟುಕೊಂಡಿರುವ ಮೋಹನ್, ತಾವು ಜೀವನ‌ ಮಾಡಲು ಪೊಲೀಸರು ರಕ್ಷಣೆ ನೀಡಬೇಕು. ಯುವತಿಯ ಕುಟುಂಬಸ್ಥರಿಂದ ತಮಗೆ ಪ್ರಾಣಭಯ ಇದ್ದು, ಸೂಕ್ತ ರಕ್ಷಣೆ ನೀಡಿ ಅಂತಾ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರ ಮೊರೆ ಹೋಗಿದ್ದಾರೆ.

Edited By : Manjunath H D
PublicNext

PublicNext

18/06/2026 09:49 pm

Cinque Terre

13.74 K

Cinque Terre

0

ಸಂಬಂಧಿತ ಸುದ್ದಿ