ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ನಾಲ್ಕು ವರ್ಷದ ಪುಟಾಣಿ ಮಗು ಹಠಾತ್ ಸಾವು

ಚಿತ್ರದುರ್ಗ: ನಾಲ್ಕು ವರ್ಷದ ಪುಟಾಣಿ ಮಗು ಹಠಾತ್ ಸಾವನ್ನಪ್ಪಿರುವ ಪ್ರಕರಣ ಜರುಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ.

ಎದೆಯೂರಿ ಎಂದು ಹೇಳಿದ್ದ ಮಗು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದೆ. 4 ವರ್ಷದ ವೈಷ್ಣವ್ ಎಂಬ ಬಾಲಕ ಮೃತ ದುರ್ದೈವಿಯಾಗಿದ್ದಾನೆ. ಹಿರಿಯೂರು ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಪುತ್ರ ಎಂದು ಕೂಡಾ ಗೊತ್ತಾಗಿದೆ. ರಾತ್ರಿ ಇಡೀ ಆರೋಗ್ಯವಾಗಿದ್ದ ಮಗು ಏಕಾಏಕಿ ಸಾವನ್ನಪ್ಪಿದ್ದು ಕುಟುಂಬ ವರ್ಗಕ್ಕೆ ಶಾಕ್ ಆಗಿದೆ. ಇದರಿಂದ ಇತ್ತೀಚೆಗೆ ಪುಟಾಣಿ ಮಕ್ಕಳು ಹಠಾತ್ ಸಾವನ್ನಪ್ಪುತ್ತಿದ್ದು ಪೋಷಕ ವಲಯದಲ್ಲೂ ಆತಂಕ ಮನೆ ಮಾಡಿದೆ.

Edited By : PublicNext Desk
PublicNext

PublicNext

18/06/2026 08:11 am

Cinque Terre

2.77 K

Cinque Terre

0

ಸಂಬಂಧಿತ ಸುದ್ದಿ