ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು: ಪಟ್ಟಣದಲ್ಲಿ ನೂತನ ತಾಲೂಕು ಅಂಚೆ ಕಚೇರಿ ಉದ್ಘಾಟಿಸಿದ ಸಂಸದ ಗೋವಿಂದ ಕಾರಜೋಳ

ಮೊಳಕಾಲ್ಮುರು:ಸಂವಹನದಲ್ಲಿ ದಶಕಗಳ ಐತಿಹ್ಯ ಹೊಂದಿರುವ ಅಂಚೆ ಇಲಾಖೆಯು ಹಲವು ಹೊಸತನಗಳ ಮೂಲಕ ಇನ್ನಷ್ಟು ಜನರಿಗೆ ಹತ್ತಿರವಾಗಿದ್ದು ಸೌಲಭ್ಯಗಳನ್ನು ಪಡೆದುಕೊಳ್ಳಲು ಜನರು ಮುಂದಾಗಬೇಕು ಎಂದು ಸಂಸತ್ ಸದಸ್ಯ ಗೋವಿಂದ ಎಂ. ಕಾರಜೋಳ ಹೇಳಿದರು.

ಭಾನುವಾರ ಇಲ್ಲಿ ನೂತನವಾಗಿ ನಿರ್ಮಿಸಿರುವ ತಾಲ್ಲೂಕು ಅಂಚೆಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಅಂಚೆ ಇಲಾಖೆ ಗ್ರಾಮೀಣ ಜನರ ಜೀವನಾಡಿಯಾಗಿದೆ, ಪತ್ರ ವ್ಯವಹಾರಕ್ಕೆ ಸೀಮಿತವಾಗಿದ್ದ ಇಲಾಖೆಯಲ್ಲಿ ಈಗ ವಿಮೆ, ಪಾರ್ಸ್‌ಲ್ ಸಾಗಣೆ ವ್ಯವಸ್ಥೆ ನಿಗದಿತ ಠೇವಣಿ ಸೌಲಭ್ಯ ಸೇರಿದಂತೆ ಹಲವು ಸೌಲಭ್ಯ ಜಾರಿ ಮಾಡಲಾಗಿದೆ.

ಬಹುವರ್ಷಗಳಿಂದ ಇಲ್ಲಿ ಇಲಾಖೆಗೆ ಸ್ವಂತ ಕಟ್ಟಡವಿಲ್ಲ ಎಂಬ ಬೇಡಿಕೆ ಇತ್ತು ಇದನ್ನು ಮನಗಂಡು ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ತಾಲ್ಲೂಕಿನ ಕೊಂಡ್ಲಹಳ್ಳಿ ಹಾಗೂ ರಾಂಪುರದಲ್ಲೂ ಸಹ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣವಾಗಲಿವೆ ಎಂದರು.

ಅಂಚೆ ಇಲಾಖೆ ಜಿಲ್ಲಾ ಅಧೀಕ್ಷಕಿ ಕೆ.ಆರ್.ಉಷಾ ಇಲಾಖೆ ಅಂಚೆ ಮಾರ್ಕೇಟಿಂಗ್ ಅಧಿಕಾರಿ ಕರಿಬಸಪ್ಪ, ತಾಲ್ಲೂಕು ಅಧಿಕಾರಿ ಪ್ರಸನ್ನಕುಮಾರ್, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ರೂಪಾ ವಿನಯಕುಮಾ‌ರ್, ಶುಭಾ ಪೃಥ್ವಿರಾಜ್, ಜಿಜೆಪಿ ಜಿಲ್ಲಾಧ್ಯಕ್ಷ ಟಿ. ಕುಮಾರಸ್ವಾಮಿ, ಮಂಡಲಾದ್ಯಕ್ಷರಾದ ಕೆ.ಟಿ. ಶ್ರೀರಾಮರೆಡ್ಡಿ, ಚನ್ನಗಾನಹಳ್ಳಿ ಮಲ್ಲೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ.ಮಂಜುನಾಥ್ ಇದ್ದರು.

Edited By : PublicNext Desk
Kshetra Samachara

Kshetra Samachara

14/06/2026 08:11 pm

Cinque Terre

1.58 K

Cinque Terre

0

ಸಂಬಂಧಿತ ಸುದ್ದಿ