ಚಿತ್ರದುರ್ಗ: 2026-27ನೇ ಸಾಲಿನ ಮುಂಗಾರು ಹಂಗಾಮಿಗೆ 'ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ'ಯನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದ್ದು, ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 'ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ' ಅಡಿ ಬೆಳೆ ವಿಮೆ ನೋಂದಣಿ ಆರಂಭವಾಗಿದ್ದು, ರೈತರು ಕಡ್ಡಾಯವಾಗಿ 'ಪ್ರೂಟ್ಸ್ ಐಡಿ' ಹೊಂದಿರಬೇಕು. ಇಫ್ಕೋ ಟೋಕಿಯೋ ಜನರಲ್ ಇನ್ಶೂರೆನ್ಸ್ ಕಂಪನಿಯು ಜಿಲ್ಲೆಗೆ ಅನುಷ್ಠಾನ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ವಿವಿಧ ಬೆಳೆಗಳಿಗೆ ನಿಗದಿಪಡಿಸಲಾದ ವಿಮಾ ಮೊತ್ತ, ರೈತರು ಪಾವತಿಸಬೇಕಾದ ಕಂತು ಮತ್ತು ನೋಂದಣಿಯ ಅಂತಿಮ ದಿನಾಂಕಗಳ ವಿವರ ಕೆಳಗಿನಂತಿದೆ.
ಹೆಸರು (ಮಳೆ ಆಶ್ರಿತ) ಬೆಳೆಗೆ ವಿಮಾ ಮೊತ್ತ ರೂ. 39,700 ಆಗಿದ್ದು, ರೈತರ ಕಂತು ರೂ. 794.
ಈರುಳ್ಳಿ (ನೀರಾವರಿ) ಬೆಳೆಗೆ ವಿಮಾ ಮೊತ್ತ ರೂ. 93,900 ಆಗಿದ್ದು, ರೈತರ ಕಂತು ರೂ. 4,695.
ಜುಲೈ 31, 2026ಕ್ಕೆ ಕೊನೆಯ ದಿನಾಂಕ
ಈ ಅವಧಿಗೆ ನೋಂದಾಯಿಸಬೇಕಾದ ಬೆಳೆಗಳ ವಿವರ:
ಮುಸುಕಿನ ಜೋಳ: ನೀರಾವರಿಗೆ ರೂ. 76,200 (ಕಂತು ರೂ. 1,524) ಹಾಗೂ ಮಳೆ ಆಶ್ರಿತಕ್ಕೆ ರೂ. 67,500 (ಕಂತು ರೂ. 1,350).
ಜೋಳ: ನೀರಾವರಿಗೆ ರೂ. 52,600 (ಕಂತು ರೂ. 1,052) ಹಾಗೂ ಮಳೆ ಆಶ್ರಿತಕ್ಕೆ ರೂ. 44,400 (ಕಂತು ರೂ. 888).
ಸಜ್ಜೆ (ಮಳೆ ಆಶ್ರಿತ): ವಿಮಾ ಮೊತ್ತ ರೂ. 34,800 (ಕಂತು ರೂ. 696).
ಸಾವೆ (ಮಳೆ ಆಶ್ರಿತ): ವಿಮಾ ಮೊತ್ತ ರೂ. 30,100 (ಕಂತು ರೂ. 602).
ತೊಗರಿ (ಮಳೆ ಆಶ್ರಿತ): ವಿಮಾ ಮೊತ್ತ ರೂ. 57,600 (ಕಂತು ರೂ. 1,152).
ಹುರುಳಿ (ಮಳೆ ಆಶ್ರಿತ): ವಿಮಾ ಮೊತ್ತ ರೂ. 23,500 (ಕಂತು ರೂ. 470).
ಸೂರ್ಯಕಾಂತಿ (ಮಳೆ ಆಶ್ರಿತ): ವಿಮಾ ಮೊತ್ತ ರೂ. 48,200 (ಕಂತು ರೂ. 964).
ಎಳ್ಳು (ಮಳೆ ಆಶ್ರಿತ): ವಿಮಾ ಮೊತ್ತ ರೂ. 31,900 (ಕಂತು ರೂ. 638).
ನೆಲಗಡಲೆ/ಶೇಂಗಾ: ನೀರಾವರಿಗೆ ರೂ. 77,800 (ಕಂತು ರೂ. 1,556) ಹಾಗೂ ಮಳೆ ಆಶ್ರಿತಕ್ಕೆ ರೂ. 65,400 (ಕಂತು ರೂ. 1,308).
ಹತ್ತಿ: ನೀರಾವರಿಗೆ ರೂ. 86,400 (ಕಂತು ರೂ. 4,320) ಹಾಗೂ ಮಳೆ ಆಶ್ರಿತಕ್ಕೆ ರೂ. 59,700 (ಕಂತು ರೂ. 2,985).
ಟೊಮ್ಯಾಟೊ: ವಿಮಾ ಮೊತ್ತ ರೂ. 1,69,800 (ಕಂತು ರೂ. 8,490).
ಈರುಳ್ಳಿ (ಮಳೆ ಆಶ್ರಿತ): ವಿಮಾ ಮೊತ್ತ ರೂ. 85,600 (ಕಂತು ರೂ. 4,280).
ಕೆಂಪು ಮೆಣಸಿನಕಾಯಿ (ಮಳೆ ಆಶ್ರಿತ): ವಿಮಾ ಮೊತ್ತ ರೂ. 90,800 (ಕಂತು ರೂ. 4,540).
ಈ ಅವಧಿಗೆ ನೋಂದಾಯಿಸಬೇಕಾದ ಬೆಳೆಗಳ ವಿವರ:
ಭತ್ತ (ನೀರಾವರಿ): ವಿಮಾ ಮೊತ್ತ ರೂ. 1,08,600 (ಕಂತು ರೂ. 2,172).
ರಾಗಿ: ನೀರಾವರಿಗೆ ರೂ. 58,300 (ಕಂತು ರೂ. 1,166) ಹಾಗೂ ಮಳೆ ಆಶ್ರಿತಕ್ಕೆ ರೂ. 49,900 (ಕಂತು ರೂ. 998).
ನವಣೆ (ಮಳೆ ಆಶ್ರಿತ): ವಿಮಾ ಮೊತ್ತ ರೂ. 32,200 (ಕಂತು ರೂ. 644).
ಬ್ಯಾಂಕುಗಳಲ್ಲಿ ಬೆಳೆ ಸಾಲ ಪಡೆದ ಎಲ್ಲಾ ರೈತರನ್ನು ಈ ಯೋಜನೆಗೆ ಕಡ್ಡಾಯವಾಗಿ ಒಳಪಡಿಸಲಾಗುತ್ತದೆ. ಒಂದು ವೇಳೆ ಸಾಲ ಪಡೆದ ರೈತರು ವಿಮೆ ಪಡೆಯಲು ಇಚ್ಛಿಸದಿದ್ದರೆ, ವಿಮೆ ನೋಂದಣಿಯ ಅಂತಿಮ ದಿನಾಂಕಕ್ಕಿಂತ ಕನಿಷ್ಠ ಏಳು ದಿನ ಮುಂಚಿತವಾಗಿ ಸಂಬಂಧಪಟ್ಟ ಬ್ಯಾಂಕ್ ವ್ಯವಸ್ಥಾಪಕರಿಗೆ ಲಿಖಿತ ಮುಚ್ಚಳಿಕೆ ಪತ್ರವನ್ನು ಸಲ್ಲಿಸಬೇಕು. ಆರ್ಥಿಕ ಸಂಸ್ಥೆಗಳು, ಬ್ಯಾಂಕುಗಳು ಹಾಗೂ ಸಾರ್ವಜನಿಕ ಸೇವಾ ಕೇಂದ್ರಗಳು (CFCs) ರೈತರಿಂದ ಸಂಗ್ರಹಿಸಿದ ವಿಮಾ ಕಂತನ್ನು ನಿಗದಿತ ಸಮಯದೊಳಗೆ ವಿಮಾ ಸಂಸ್ಥೆಗೆ ವರ್ಗಾಯಿಸುವುದು ಕಡ್ಡಾಯ. ಈ ಸಂಸ್ಥೆಗಳ ನಿರ್ಲಕ್ಷ್ಯದಿಂದ ಯಾವುದೇ ಲೋಪದೋಷ ಉಂಟಾಗಿ ಪರಿಹಾರ ವಿಳಂಬವಾದರೆ, ಆಯಾ ಸಂಸ್ಥೆಗಳೇ ನೇರ ಹೊಣೆಗಾರರಾಗಿರುತ್ತವೆ ಎಂದು ಜಂಟಿ ಕೃಷಿ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.
ನೋಂದಣಿಯ ಅಂತಿಮ ದಿನಾಂಕಗಳಂದು ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ (CFCs) ಜನದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದರಿಂದ ನೋಂದಣಿ ಪ್ರಕ್ರಿಯೆಯಲ್ಲಿ ತಪ್ಪುಗಳು ಸಂಭವಿಸಿ, ವಿಮೆ ಪರಿಹಾರ ದೊರೆಯದಂತಾಗುವ ಅಪಾಯವಿರುತ್ತದೆ. ಆದ್ದರಿಂದ, ರೈತರು ಯಾವುದೇ ತೊಂದರೆಯಾಗದಂತೆ ಸಕಾಲದಲ್ಲಿ ತಮ್ಮ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ. ರೈತರು ತಮ್ಮ ಹೋಬಳಿ ಮಟ್ಟದ ಬೆಳೆಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Kshetra Samachara
19/06/2026 07:27 am