ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO : ಬೆಂಗಳೂರಿನಲ್ಲಿ ಮತ್ತೆ ಬೈಕ್ ವೀಲ್ಹಿಂಗ್ ಹುಚ್ಚಾಟ - ಪುಂಡರ ಪುಂಡಾಟಕ್ಕೆ ಖಾಕಿ ಲಗಾಮು!

ಬೆಂಗಳೂರು: ನಗರದ ಹೆದ್ದಾರಿ ಹಾಗೂ ರಸ್ತೆಗಳಲ್ಲಿ ಶೋಆಫ್‌ಗಾಗಿ ಅಪಾಯಕಾರಿ ಬೈಕ್ ವೀಲ್ಹಿಂಗ್ ಮಾಡುತ್ತಾ ಹುಚ್ಚಾಟ ಮೆರೆಯುತ್ತಿದ್ದ ಯುವಕರಿಗೆ ಬೆಂಗಳೂರು ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಪದೇ ಪದೇ ಇಂತಹ ಕೃತ್ಯಗಳಲ್ಲಿ ತೊಡಗಿದ್ದ ಪುಂಡರಿಗೆ ಬಿಸಿ ಮುಟ್ಟಿಸಲು ಖಾಕಿ ಇಲಾಖೆ ಮುಂದಾಗಿದೆ.

ವೀಲ್ಹಿಂಗ್ ಎಂಬುದು ವಾಹನದ ನಿಯಂತ್ರಣ ಕಳೆದುಕೊಳ್ಳುವ ಅತ್ಯಂತ ಅಪಾಯಕಾರಿ ಕೃತ್ಯ, ಇದು ಕೇವಲ ಪ್ರತಿಭೆಯ ಪ್ರದರ್ಶನವಲ್ಲ, ಬದಲಿಗೆ ನಿಮ್ಮ ಮತ್ತು ರಸ್ತೆಯಲ್ಲಿರುವ ಇತರ ವಾಹನ ಸವಾರರ ಜೀವಕ್ಕೆ ಅಪಾಯ ತಂದೊಡ್ಡುವ ಗಂಭೀರ ಅಪರಾಧವಾಗಿದೆ.

ಇಂತಹ ಸಂಚಾರ ನಿಯಮ ಉಲ್ಲಂಘಿಸುವವರನ್ನು ಗುರುತಿಸಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ. ಜವಾಬ್ದಾರಿಯುತವಾಗಿ ವಾಹನ ಚಲಾಯಿಸಿ, ಬೇಜವಾಬ್ದಾರಿತನಕ್ಕೆ ಅವಕಾಶ ನೀಡಬೇಡಿ ಎಂದು ಪುಂಡರಿಗೆ ಖಾಕಿ ಇಲಾಖೆ ಖಡಕ್ ಸಂದೇಶ ರವಾನಿಸಿದೆ.

ಈ ಸಂಬಂಧ, ಬೆಂಗಳೂರು ಸಂಚಾರ ಪೊಲೀಸರು ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಜಾಗೃತಿ ಮೂಡಿಸಿದ್ದಾರೆ.

Edited By : Abhishek Kamoji
PublicNext

PublicNext

15/06/2026 07:55 pm

Cinque Terre

10.44 K

Cinque Terre

0

ಸಂಬಂಧಿತ ಸುದ್ದಿ