ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಆರ್‌ಎಸ್‌ಎಸ್ ಬ್ಯಾನ್ ಮಾಡುವ ವಿಚಾರ ನಾನು ಒಪ್ಪಲ್ಲ ಎಂದ ನಟ ಚೇತನ್

ಧಾರವಾಡ: ಆರ್‌ಎಸ್‌ಎಸ್ ಬಗ್ಗೆ ಗೃಹ ಸಚಿವ ಪ್ರಿಯಾಂಕ ಖರ್ಗೆ ಹೇಳಿರುವ ವಿಚಾರವಾಗಿ ಧಾರವಾಡದಲ್ಲಿ ನಟ ಚೇತನ್ ಪ್ರತಿಕ್ರಿಯೆ ನೀಡಿದ್ದಾರೆ.

ಆರ್‌ಎಸ್ಎಸ್ ಬ್ಯಾನ್ ಮಾಡುವ ವಿಚಾರ ನಾನು ಒಪ್ಪಲ್ಲ, ಸೆಲೆಕ್ಟೆಡ್ ಟಾರ್ಗೆಟ್‌ಗೆ ಕೂಡ ಒಪ್ಪಲ್ಲ. ಯಾರು ಕಾನೂನು ಉಲ್ಲಂಘನೆ ಮಾಡುತ್ತಾರೋ ಅವರ ಮೇಲೆ ಕ್ರಮ ಆಗಲಿ. ಆದರೆ, ನೀವು ನಿಮ್ಮ ಪ್ರತಿಸ್ಪರ್ಧಿಯ ಬಾಯಿ ಮುಚ್ಚಿಸಲು, ಚುನಾವಣೆಯಲ್ಲಿ ಸೋಲಿಸಲು ಬಾಯಿ ಮುಚ್ಚಿಸೋಕೆ ಹೋದರೆ ಅದು ಸರ್ವಾಧಿಕಾರಿ ಧೋರಣೆ ಆಗುತ್ತದೆ ಎಂದರು.

ಪಿಎಫ್‌ಐ ಬ್ಯಾನ್ ಆದಾಗ ಕೂಡ ನಾನು ಒಪ್ಪಿಲ್ಲ. ಬಿಜೆಪಿ, ಕಾಂಗ್ರೆಸ್ ಸೇರಿ ಅದನ್ನು ಬ್ಯಾನ್ ಮಾಡಿದ್ದರು. ಬಿಜೆಪಿಯದು ಹಿಂದುತ್ವದ ಮನಸ್ಥಿತಿ, ಕಾಂಗ್ರೆಸ್ ಮುಸ್ಲಿಂ ಮತ ಚದುರಲಿದೆ ಎಂದು ಪಿಎಫ್‌ಐ ಬ್ಯಾನ್ ಮಾಡಿತ್ತು.

ತಮ್ಮ ವಿಚಾರಗಳಿಂದ ಸೋಲಿಸಿ, ಬ್ಯಾನ್ ಯಾವಾಗ ಮಾಡಬೇಕು ಅಂದರೆ ತಮ್ಮ ವಿಚಾರದ ಮೇಲೆ ಗಟ್ಟಿತನ ಇಲ್ಲದೇ ಇದ್ದಾಗ. ಅವರು ಜನಪರ ಇದ್ದಾರೆ ಎಂದು ಬ್ಯಾನ್ ಮಾಡಲು ಹೋಗುವುದು ಸರಿಯಲ್ಲ.

ಸಂಘಟನೆ ರಿಜಿಸ್ಟರ್ ಆಗಬೇಕು ಎಂಬ ವಿಚಾರ ಬಂದಾಗ ಯಾವುದು ಇವೆ ಅದು ರಿಜಿಸ್ಟರ್ ಆಗಬೇಕು ಎಂಬುದು ಮುಖ್ಯ ಉದ್ದೇಶ ಆಗಬೇಕು. ಆದರೆ ಆರ್‌ಎಸ್ಎಸ್‌ನ್ನು ಟಾರ್ಗೆಟ್ ಮಾಡುವುದು ನನಗೆ ಸರಿ ಕಾಣುತ್ತಿಲ್ಲ ಎಂದರು.

ಅಧಿಕಾರ ವಹಿಸಿಕೊಂಡ ಮೇಲೆ ನಿಮ್ಮ ವಿರೋಧಿಗಳ ಮೇಲೆ ದಬ್ಬಾಳಿಕೆ ಮಾಡುವಂತೆ ಆಗಬಾರದು. ಯಾವುದೇ ಸಂಘಟನೆ ರಿಜಿಸ್ಟರ್ ಆಗಿಲ್ಲ ಅಂದರೆ ಅದನ್ನು ರಿಜಿಸ್ಟರ್ ಮಾಡಿ, ಮುಂದೆ ಕೆಲಸ ಮಾಡಿ.

ನಿಮಗೆ ಬಹಳಷ್ಟು ಕೆಲಸ ಇವೆ, ನೀವು ಒಂದೇ ಸಂಘಟನೆ ನೋಡಿ ಅದು ಒಂದೇ ಸಮಾಜಕ್ಕೆ ಸಮಸ್ಯೆ ಎಂದರೆ ಹೇಗೆ? 140 ವರ್ಷಗಳಿಂದ ಕಾಂಗ್ರೆಸ್ ಇದೆ, ಕಾಂಗ್ರೆಸ್ ವೈಫಲ್ಯದಿಂದಲೇ ಹಿಂದುತ್ವ ಬೆಳೆದಿದ್ದಲ್ವಾ? ಕಾಂಗ್ರೆಸ್ ವೈಫಲ್ಯದಿಂದಲೇ ಜನತಾ ಪಕ್ಷ ಬೆಳೆದಿದ್ದು, ಉಳಿದಂತೆ ಕೂಡ ಅಂಬೇಡ್ಕರ್ ಪೆರಿಯಾರ್ ಸಮಾನತಾವಾದ ಬೆಳೆದಿದೆ.

ಅದು ಕಾಂಗ್ರೆಸ್ ಮೂಲ ಸಮಸ್ಯೆ. ಅದನ್ನು ಸರಿಪಡಿಸಿ, ಎಲ್ಲವೂ ಪಾರದರ್ಶಕ ಇರಬೇಕು, ಯಾವುದೇ ಸಂಘಟನೆ ಇರಲಿ, ಸಮಾಜ ಸೇವೆ ಮಾಡಲು ಸಂಘಟನೆ ರಿಜಿಸ್ಟರ್ ಆಗಲಿ. ಆರ್ಥಿಕವಾದ ಹಣಕಾಸಿನ ವಿಚಾರ ಕೂಡ ಪಾರದರ್ಶಕ ಆಗಿರಬೇಕು. ಅದು ಕೂಡ ಮುಖ್ಯ, ಆರ್‌ಎಸ್ಎಸ್ ಪ್ರಶ್ನೆ ಮಾಡಿದ್ದು ನನಗೆ ಸಮಸ್ಯೆ ಅಲ್ಲ, ಬರೀ ಆರ್‌ಎಸ್ಎಸ್ ಪ್ರಶ್ನೆ ಮಾಡಿದ್ದು ಸಮಸ್ಯೆ. ಕಾರ್ಪೊರೇಟ್ ಕಂಪನಿ, ‌ರಿಯಲ್ ಎಸ್ಟೇಟ್ ಕಂಪನಿ ಕೊಳ್ಳೆ ಹೊಡೆಯುತ್ತಿವೆ. ಅದನ್ನು ಪ್ರಶ್ನೆ ಮಾಡುತ್ತಿಲ್ಲ.

ಅವರ ಮೇಲೆ ಕಡಿವಾಣ ಹಾಕದೇ ಸಂಸ್ಥೆ ಪ್ರಶ್ನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ? ನಾವು ಆರ್‌ಎಸ್ಎಸ್ ಸಿದ್ಧಾಂತ ಒಪ್ಪಲ್ಲ, ಅವರ ಸಿದ್ಧಾಂತ ಬೇರೆ ನಮ್ಮದೇ ಬೇರೆ. ಆದರೆ ಅವರ ವಿಚಾರ ಮಂಡನೆ ಮಾಡುವ ಹಕ್ಕನ್ನು ನಾವು ಸಂವಿಧಾನದಲ್ಲಿ ಎತ್ತಿ ಹಿಡಿಯುತ್ತೇವೆ.

ಈ‌ ಕಾಂಗ್ರೆಸ್ ಪಕ್ಷ ಸಂವಿಧಾನ ಎಂದು ಜೇಬಿನಿಂದ ತೆಗೆದು ತೋರಿಸಿ ಅದೇ ಉಲ್ಲಂಘನೆ ಮಾಡುತ್ತ ಬರುತ್ತಿದೆ. ಬಿಜೆಪಿ ನೇರವಾಗಿ ಸಂವಿಧಾನ ಉಲ್ಲಂಘನೆ ಮಾಡುತ್ತದೆ. ಇವರ ನಡುವೆ ವ್ಯತ್ಯಾಸ ಇಲ್ಲ ಎಂದರು.

ಬಿಡದಿ ಸಮಸ್ಯೆ ಬಗ್ಗೆ ಮಾತನಾಡಿದ ಅವರು, ಬಿಡದಿ ಅನ್ನೋದು ದೊಡ್ಡ ಸಮಸ್ಯೆ ಇದೆ. 9600 ಎಕರೆ ರೈತರ ಫಲವತ್ತಾದ ಭೂಮಿ, ಅದನ್ನ ನಾಶ ಮಾಡಬೇಕು, ಅದನ್ನ ಕಬಳಿಸಬೇಕು ಅದನ್ನ ಶ್ರೀಮಂತರಿಗೆ ಮಾಡಬೇಕು ಎಂದರೆ ನಾವು ವಿರೋಧ ಮಾಡುತ್ತೇವೆ.

ಕಾಂಗ್ರೆಸ್ ಸರ್ಕಾರ ಮತ್ತು ಸಿಎಂ ಡಿಕೆಶಿ ಅವರ ಮನಸ್ಥಿತಿ ಬಡವರ ಪರ ಅಲ್ಲ. ಅದು ಶ್ರೀಮಂತರಿಗಾಗಿ ಶ್ರೀಮಂತರಿಗೋಸ್ಕರ ಎದ್ದು ಕಾಣುತ್ತಿದೆ. ಅದು ನಮಗೆ ಆಗಬಾರದು.

ಕುಮಾರಸ್ವಾಮಿ ಕೂಡ ಹಿಂದೆ ಬಿಡದಿ ಪರ ಇದ್ದರು. ಅದನ್ನ ಈಗ ಅವರು ವಿರೋಧ ಮಾಡುತ್ತಿರಬಹುದು. ಬಂಡವಾಳಶಾಹಿ ಶಕ್ತಿಗಳು, ಬಿಸಿನೆಸ್ ಮನಸ್ಥಿತಿಗಳಿಂದ ನಮಗೆ ಲಾಭ ಇಲ್ಲ. ರೈತರ ಜೀವನಕ್ಕೆ ಅವರು ಸಹಾಯ ಆಗುತ್ತೇವೆ ಎಂದು ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರು. ಈಗಲೂ ಕಾಂಗ್ರೆಸ್ ತೊಂದರೆ ಕೊಡುತ್ತಿದೆ, ಬಿಡದಿ ಟೌನ್ ಶಿಪ್ ಆಗಬಾರದು ಅದು ಜನವಿರೋಧಿ ಎಂದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/06/2026 08:02 pm

Cinque Terre

18.27 K

Cinque Terre

1

ಸಂಬಂಧಿತ ಸುದ್ದಿ