ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯವರು ನಡೆಸುವ ಪ್ರತಿ ಕಾರ್ಯಕ್ರಮದಲ್ಲೂ ಇಲ್ಲಿನ ಮಣ್ಣಿನ, ಪದ್ಧತಿಗಳ ಬಾಂಧವ್ಯ ಕಾಣುತ್ತದೆ - ಹರಿರಾಮ್ ಶಂಕರ್

ಉಡುಪಿ: ಉಡುಪಿಯವರು ನಡೆಸುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಇಲ್ಲಿನ ಮಣ್ಣಿನ ಮತ್ತು ಪದ್ಧತಿಗಳ ಬಾಂಧವ್ಯ ಕಾಣುತ್ತದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹರಿರಾಮ್ ಶಂಕರ್ ಹೇಳಿದರು.

ಬೆಂಗಳೂರಿನ ರಾಜಾಜಿನಗರದ ಸ್ಪಂದನಾ ಸೇವಾ ಸಂಸ್ಥೆ ವತಿಯಿಂದ ಉಡುಪಿ ಜಿಲ್ಲೆಯ ಕಲ್ಯಾಣಪುರದ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ವಿಜಯ ಕರ್ನಾಟಕ ಉಡುಪಿ ಜಿಲ್ಲಾ ವರದಿಗಾರ ಸುಬ್ರಹ್ಮಣ್ಯ. ಜಿ. ಕುರ್ಯ ರವರಿಗೆ "ಯಶೋ ಮಾಧ್ಯಮ-2026" ಪ್ರಶಸ್ತಿಯನ್ನು ವಿತರಿಸಿ ಅವರು ಮಾತನಾಡಿದರು.

ನಾನು ನೋಡಿದ ಪ್ರಕಾರ ಉಡುಪಿಯಲ್ಲಿ ಆಗುವ ಹೆಚ್ಚಿನ ಕಾರ್ಯಕ್ರಮಗಳೆಲ್ಲ ಅದು ಸಣ್ಣದಿರಲಿ, ದೊಡ್ಡದಿರಲಿ, ತುಂಬಾ ಅರ್ಥಪೂರ್ಣವಾಗಿರುತ್ತದೆ. ಬೆಂಗಳೂರಿನ ಸ್ಪಂದನಾ ಸೇವಾ ಸಂಸ್ಥೆಯವರು ಈ ಶಾಲೆಯ ಮಕ್ಕಳಿಗೆ ನೀಡುವ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಹಿರಿಯ ಪತ್ರಕರ್ತರಿಗೆ ಸನ್ಮಾನ ಮಾಡುವುದಕ್ಕೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಅಂತ ನಾನು ಅಂದುಕೊಳ್ಳುತ್ತಿದ್ದೇನೆ. ಸ್ಪಂದನಾ ಸಂಸ್ಥೆಯಿಂದ ಈ ತರದ ಅರ್ಥವತ್ತಾದ ಕಾರ್ಯಕ್ರಮಗಳು ಮಾಡಲಿಕ್ಕೆ ಶಕ್ತಿ ಸಿಗಲಿ. ಇನ್ನು ಮುಂದೆಯೂ ಸಹ ಈ ಮಕ್ಕಳ ಕೈ ಹಿಡಿದು ಅವರಿಗೆ ಅವರು ಆಸೆ ಪಡುವಂತಹ ಹುದ್ದೆಗಳಿಗೆ, ಮುಂದುವರಿಯಲು ಅವಕಾಶ ಕೊಡಲಿಕ್ಕೆ ಈ ಸಂಸ್ಥೆಗೆ ಆಗಲಿ ಎಂದರು.

ಪತ್ರಕರ್ತ ಜನಾರ್ದನ್ ಕೊಡವೂರು ಮಾತನಾಡಿ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆಯ ಜೊತೆಗೆ ಉಡುಪಿ ಜಿಲ್ಲೆಯ ಪತ್ರಕರ್ತರಿಗೆ ನೀಡುವ "ಯಶೋ ಮಾಧ್ಯಮ-2026" ಪ್ರಶಸ್ತಿಯನ್ನು ಸುಬ್ರಹ್ಮಣ್ಯ. ಜಿ. ಕುರ್ಯ ರವರಿಗೆ ನೀಡಿರುವುದು ಶ್ಲಾಘನೀಯ. ಹಾಗೆಯೇ ಶ್ರೀವೆಂಕಟರಮಣ ದೇವಸ್ಥಾನಕ್ಕೆ ನೂತನವಾಗಿ ಆಯ್ಕೆಯಾದ ಆಡಳಿತ ಮಂಡಳಿಯವರಿಗೆ ಸನ್ಮಾನ ಮಾಡಿರುವುದು ಒಳ್ಳೆಯ ಕೆಲಸ ಎಂದು ಹೇಳಿದರು.

"ಯಶೋ ಮಾಧ್ಯಮ-2026"ಪ್ರಶಸ್ತಿ ಪುರಸ್ಕೃತರಾದ ಸುಬ್ರಹ್ಮಣ್ಯ. ಜಿ. ಕುರ್ಯ ರವರು ಮಾತನಾಡಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿ, ವಿದ್ಯಾರ್ಥಿಗಳಿಗೆ ಶುಭ ಕೋರಿದರು.

Edited By : Vijay Kumar
PublicNext

PublicNext

15/06/2026 09:47 pm

Cinque Terre

8.21 K

Cinque Terre

0

ಸಂಬಂಧಿತ ಸುದ್ದಿ