ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಕಾರು ಡಿಕ್ಕಿಯಾಗಿ ಎತ್ತುಗಳ ಕಾಲು, ಕೊಂಬು ಮುರಿತ..!

ಬಾಗಲಕೋಟೆ: ಹಿಂಬದಿಯಿಂದ ಎತ್ತಿನ ಬಂಡಿಗೆ ಕಾರು ಡಿಕ್ಕಿಯಾಗಿ, ಒಂದು ಎತ್ತಿನ ಕಾಲು ಮುರಿತ, ಮತ್ತೊಂದು ಎತ್ತಿಗೆ ಕೊಂಬು ಮುರಿದು ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮತ್ತಿಕಟ್ಟಿ ಗ್ರಾಮದ ಬಳಿ ನಡೆದಿದೆ.

ಕುಡಿದ ಮತ್ತಿನಲ್ಲಿ ವೇಗವಾಗಿ ಕಾರು ಚಲಾಯಿಸಿದ ಕಾರ್ ಚಾಲಕ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದಿದ್ದಾನೆ. ಫಕೀರಪ್ಪ ಕುರಿ ಎಂಬ ರೈತ ಹಾಗೂ ಕಾರು ಚಾಲಕನಿಗೆ ಗಂಭೀರ ಗಾಯವಾಗಿವೆ. ಅಂದನಗೌಡ ಪಾಟೀಲ್ ಎಂಬ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಕೆಎ 02 AG0663 ಸಂಖ್ಯೆ ಕಾರು ‌ಕೆರೂರುದಿಂದ ಯಂಕಂಚಿ ಕಡೆಗೆ ಹೊರಟಿತ್ತು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕೆರೂರು ಪೊಲೀಸರು ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By :
Kshetra Samachara

Kshetra Samachara

16/06/2026 10:17 pm

Cinque Terre

3.48 K

Cinque Terre

0

ಸಂಬಂಧಿತ ಸುದ್ದಿ