ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ​"ಅಂಬೇಡ್ಕರ್, ಗಾಂಧೀಜಿಯೇ RSS ಶಾಖೆಗೆ ಬಂದಿದ್ರು, ನೀವೂ ಬನ್ನಿ!" -ಪ್ರಿಯಾಂಕ್ ಖರ್ಗೆಗೆ ಕೋಟ ಶ್ರೀನಿವಾಸ ಪೂಜಾರಿ ಆಹ್ವಾನ!

ಚಿಕ್ಕಮಗಳೂರು: ಆರ್‌ಎಸ್‌ಎಸ್ ನೋಂದಣಿ ಮಾಡಿಕೊಳ್ಳಿ ಎಂಬ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರತಿಕ್ರಿಯಿಸಿದ್ದು ರಾಜ್ಯದ ಗೃಹ ಇಲಾಖೆಯು ಸುಮಾರು 80 ಸಾವಿರದಿಂದ 1 ಲಕ್ಷದಷ್ಟು ಪೊಲೀಸ್ ಸಿಬ್ಬಂದಿಯನ್ನು ಹೊಂದಿರುವ ಬೃಹತ್ ಇಲಾಖೆಯಾಗಿದೆ.

ಇದರಲ್ಲಿ ನಾಗರಿಕ ಪೊಲೀಸ್, ಸಶಸ್ತ್ರ ಮೀಸಲು ಪಡೆ, ಸಂಚಾರಿ ಪೊಲೀಸ್, ಸಿಐಡಿ, ಸಿಸಿಬಿ, ಅಗ್ನಿಶಾಮಕ ದಳ ಮತ್ತು ಗೃಹರಕ್ಷಕ ದಳ ಸೇರಿದಂತೆ ಹಲವು ವಿಭಾಗಗಳು ಬರುತ್ತವೆ ರಾಜ್ಯದ ಆರುವರೆ ಕೋಟಿ ಜನರ ಹಿತ ಕಾಯುವ, ಶಾಂತಿ ಸುವ್ಯವಸ್ಥೆ ಕಾಪಾಡುವ ಮತ್ತು ಶಾಲೆಗಳ ಎದುರು ಮಾದಕ ದ್ರವ್ಯ ಮಾರಾಟ ಮಾಡುವುದನ್ನು ನಿಯಂತ್ರಿಸುವ ದೊಡ್ಡ ಜವಾಬ್ದಾರಿ ಗೃಹ ಸಚಿವರ ಮೇಲಿದೆ ಎಂದು ಹೇಳಿರುವ ಸಂಸದರು.

ಇಂತಹ ಪ್ರಮುಖ ಜವಾಬ್ದಾರಿಯನ್ನು ಬಿಟ್ಟು ಆರ್‌ಎಸ್‌ಎಸ್‌ ಶಾಖೆಗಳ ಬಗ್ಗೆ ಮಾತನಾಡುವುದು ಸರಿಯಲ್ಲ ಈ ಹಿಂದೆ ಕಾಂಗ್ರೆಸ್ ನಾಯಕರಾಗಿ ಮಾಜಿ ರಾಷ್ಟ್ರಪತಿಗಳಾಗಿದ್ದ ಶಂಕರ್ ದಯಾಳ್ ಶರ್ಮಾ ಅವರು ನಾಗ್ಪುರದ ಆರ್‌ಎಸ್‌ಎಸ್‌ ಕಚೇರಿಗೆ ಭೇಟಿ ನೀಡಿ ಸಂಘಟನೆಯ ರಾಷ್ಟ್ರ ನಿರ್ಮಾಣದ ಕೆಲಸವನ್ನು ಶ್ಲಾಘಿಸಿದ್ದರು ಎಂಬುದನ್ನು ನೆನಪಿಸಿದ್ದಾರೆ.

ಅಲ್ಲದೆ, ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮಾ ಗಾಂಧೀಜಿ ಅವರೂ ಕೂಡ ಈ ಹಿಂದೆ ಆರ್‌ಎಸ್‌ಎಸ್‌ ಶಿಬಿರಗಳಿಗೆ ಭೇಟಿ ನೀಡಿ ವೀಕ್ಷಿಸಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಅಥವಾ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಆರ್‌ಎಸ್‌ಎಸ್‌ ಬಗ್ಗೆ ಏನಾದರೂ ಆತಂಕವಿದ್ದರೆ, ಒಮ್ಮೆ ಶಾಖೆಗೆ ಬಂದು ಅದರ ಕಾರ್ಯವೈಖರಿಯನ್ನು ನೋಡುವಂತೆ ಆಹ್ವಾನ ನೀಡಿದ್ದಾರೆ.

ಆರ್‌ಎಸ್‌ಎಸ್‌ ಯುವಕರಲ್ಲಿ ದೇಶಭಕ್ತಿ ಮತ್ತು ರಾಷ್ಟ್ರಪ್ರೇಮವನ್ನು ಬೆಳೆಸುವ ಸಂಘವಾಗಿದ್ದು, ಗೃಹ ಸಚಿವರು ಇಲಾಖೆಯ ಕಡೆಗೆ ಹೆಚ್ಚು ಗಮನ ಹರಿಸಿ ಜನರಿಗೆ ನೆಮ್ಮದಿಯ ಬದುಕು ನೀಡಲು ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

Edited By :
PublicNext

PublicNext

17/06/2026 08:14 am

Cinque Terre

11.02 K

Cinque Terre

1

ಸಂಬಂಧಿತ ಸುದ್ದಿ