ಬೆಂಗಳೂರು : ರಾಜಧಾನಿ ಬೆಂಗಳೂರಿನ ವಾರ್ಡ್‌ಗಳ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಲೇ ಇದೆ. ಇದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ, ಸದ್ಯ ದತ್ತಾತ್ರೇಯ ವಾರ್ಡ್‌ನ ರಸ್ತೆಗಳಂತೂ ತೀರಾ ಅಧ್ವಾನದ ಸ್ಥಿತಿಗೆ ಬಂದು ತಲುಪಿವೆ. ಈ ಭಾಗದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರು ಪ್ರತಿದಿನ ನರಕಯಾತನೆ ಅನುಭವಿಸುವಂತಾಗಿದೆ. ವಾರ್ಡ್‌ನ ಈ ಎಲ್ಲಾ ಗಂಭೀರ ಸಮಸ್ಯೆಗಳ ಕುರಿತು ದತ್ತಾತ್ರೇಯ ವಾರ್ಡ್‌ನ ಬಿಜೆಪಿ ಪಕ್ಷದ ಆಕಾಂಕ್ಷಿಯಾಗಿರುವ ಭರತ್ ಮುನಿಯಪ್ಪ ಅವರು ನಮ್ಮ ಪಬ್ಲಿಕ್ ನೆಕ್ಸ್ಟ್ ಜೊತೆಗೆ ವಿಶೇಷವಾಗಿ ಮಾತನಾಡಿದ್ದಾರೆ. ವಾರ್ಡ್‌ನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ತೀವ್ರ ಕಳಕಳಿ ವ್ಯಕ್ತಪಡಿಸಿರುವ ಭರತ್ ಮುನಿಯಪ್ಪ ಅವರು, ಇಲ್ಲಿನ ಜನಸಾಮಾನ್ಯರು ಎದುರಿಸುತ್ತಿರುವ ಕಷ್ಟಗಳನ್ನು ಬಿಚ್ಚಿಟ್ಟಿದ್ದಾರೆ. ರಸ್ತೆಗಳ ದುಃಸ್ಥಿತಿಯಿಂದಾಗಿ ಸಣ್ಣಪುಟ್ಟ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಿದ್ದು, ವೃದ್ಧರು ಮತ್ತು ಶಾಲಾ ಮಕ್ಕಳು ಓಡಾಡಲು ಭಯಪಡುವ ವಾತಾವರಣ ಸೃಷ್ಟಿಯಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದರೊಂದಿಗೆ ವಾರ್ಡ್‌ನಲ್ಲಿ ತಲೆದೋರಿರುವ ಇತರ ಪ್ರಮುಖ ಸಮಸ್ಯೆಗಳ ಸಂಪೂರ್ಣ ಮಾಹಿತಿಯನ್ನು ಅವರು ನಮ್ಮ ವಾಹಿನಿಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾದರೆ ದತ್ತಾತ್ರೇಯ ವಾರ್ಡ್‌ನ ಅಭಿವೃದ್ಧಿ ಮತ್ತು ಜನರ ಸಂಕಷ್ಟಗಳ ಬಗ್ಗೆ ಭರತ್ ಮುನಿಯಪ್ಪ ಅವರು ಪಬ್ಲಿಕ್ ನೆಕ್ಸ್ಟ್ ನಲ್ಲಿ ಏನೆಲ್ಲಾ ಹೇಳಿದ್ದಾರೆ? ಬನ್ನಿ ಕೇಳಿಕೊಂಡು ಬರೋಣ
PublicNext
17/06/2026 12:45 pm
LOADING...