ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾನಗಲ್ ಪೋಕ್ಸೋ, ಸೈಬರ್ ಜಾಲದಿಂದ ಎಚ್ಚರ! ಮಕ್ಕಳ ಸುರಕ್ಷೆಗೆ ಪೊಲೀಸರ ಪಾಠ

ಹಾನಗಲ್ : ಹಾನಗಲ್ ಪಟ್ಟಣದ ಕುಮಾರೇಶ್ವರ ನಗರದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪೋಕ್ಸೋ ಹಾಗೂ ಸೈಬರ್ ಕ್ರೈಮ್ ವಂಚನೆ ಬಗ್ಗೆ ಕಾನೂನು ಜಾಗೃತಿ ಅರಿವು ಕಾರ್ಯಾಗಾರ ನಡೆಸಲಾಯಿತು.

ಜಿಲ್ಲೆಗಳಲ್ಲಿ ಪೋಕೋ ಹಾಗೂ ಸೈಬರ್ ವಂಚನೆ  ಪ್ರಕರಣಗಳು ಹೇಚ್ಚಾಗುತ್ತಿದ್ದು, ಶಾಲೆ, ಕಾಲೇಜುಗಳಲ್ಲಿ ಪೋಕೋ ಕಾಯ್ದೆ ಹಾಗೂ ಸೈಬರ್ ವಂಚನೆ ಬಗ್ಗೆ ಜಾಗೃತಿ ಮೂಡಿಸಲು ಹಾವೇರಿ ಸೈಬರ್ ಕ್ರೈಮ್ ಠಾಣೆ ಪೊಲೀಸ್ ನಾಗೇಂದ್ರ ಹಾನಗಲ್ ಅವರು

ವಿದ್ಯಾರ್ಥಿಗಳಿಗೆ ಸೈಬ‌ರ್ ಅಪರಾಧಗಳ ಕುರಿತು ವಿವಿಧ ವಿಧಗಳು, ಆನ್ಸೆನ್ ವಂಚನೆಗಳಿಂದ ತಪ್ಪಿಸಿಕೊಳ್ಳುವ ವಿಧಾನಗಳು, ಸುರಕ್ಷಿತ ಇಂಟರ್ನೆಟ್ ಬಳಕೆ, ವೈಯಕ್ತಿಕ ಮಾಹಿತಿಯನ್ನು ರಕ್ಷಿಸುವ ಕುರಿತು ಹಾಗೂ ಕಳೆದು ಹೋದ ಮೊಬೈಲ್ ಅನ್ನು CEIR ಪೋರ್ಟಲ್ ಮುಖಾಂತರ ಬ್ಲಾಕ್ ಮಾಡುವ ಬಗ್ಗೆ ವಿವರವಾಗಿ ಉಪನ್ಯಾಸ ಮಾಡಿದರು.

ದಿನದಿಂದ ದಿನಕ್ಕೆ ಸೈಬರ್ ಹಾಗೂ ಪೋಕ್ಸೋ ಅಪರಾಧಗಳು ಹೆಚ್ಚಾಗುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳು ಜಾಗೃತರಾಗಿರಬೇಕು ಎಂದು ತಿಳಿಸಿ, ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡು ಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು.

ಲೋಕೇಶ್ ಸುಣಗಾರ್ ಪಬ್ಲಿಕ್ ನೆಕ್ಸ್ಟ್ ಹಾನಗಲ್

Edited By :
Kshetra Samachara

Kshetra Samachara

18/06/2026 07:07 am

Cinque Terre

2.8 K

Cinque Terre

0

ಸಂಬಂಧಿತ ಸುದ್ದಿ