ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾವಿ: ಅವಧಿ ಮೀರಿದ ಔಷಧಿ ವಿತರಣೆ - ಫಸಲಿಗೆ ಬಂದ ಮೂರು ಎಕರೆ ಅಡಿಕೆ ಬೆಳೆ ಹಾಳು

ಶಿಗ್ಗಾವಿ : ಅವಧಿ ಮೀರಿದ ಔಷಧಿ ಸಿಂಪರಣೆ ಮಾಡಿದ ಹಿನ್ನೆಲೆ ಫಸಲಿಗೆ ಬಂದ ಅಡಿಕೆ ಬೆಳೆ ಸಂಪೂರ್ಣ ಹಾಳಾದ ಘಟನೆ ಶಿಗ್ಗಾವಿ ತಾಲೂಕಿನ ಹೋತನಹಳ್ಳಿ ಗ್ರಾಮದಲ್ಲಿ ನಡೆದಿದೆ,

ಹೋತನಹಳ್ಳಿ ಗ್ರಾಮದ ಖಾದರಸಾಬ್ ಎಂಬ ರೈತ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿಯಲ್ಲಿರುವ ಮಲ್ಲಿಕಾರ್ಜುನ ಅಗ್ರೋ ಕೇಂದ್ರದಲ್ಲಿ ಔಷಧಿ ಖರೀದಿ ಮಾಡಿದ್ದಾನೆ, ಆದರೆ ಅಂಗಡಿ ಮಾಲೀಕ ಅವಧಿ ಮೀರಿದ ಔಷಧಿಯನ್ನು ನೀಡಿದ್ದು ರೈತ ಅಡಿಕೆ ಮರಗಳಿಗೆ ಸಿಂಪರಣೆ ಮಾಡಿದ್ದಾನೆ ಆದರೆ ಸಿಂಪರಣೆ ಮಾಡಿದ ಎರಡೇ ದಿನದಲ್ಲಿ ಅಡಿಕೆ ಉದುರಿ ಬಿದ್ದು ಹಾಳಾಗಿ ಹೋಗಿದ್ದು ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಅಲ್ಲದೆ ಅಂಗಡಿಯವರನ್ನು ಈ ಬಗ್ಗೆ ಕೇಳಿದರೆ ನಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುತಿದ್ದಾರೆ ಎಂದು ರೈತ ಅಳಲು ತೋಡಿಕೊಂಡಿದ್ದಾನೆ,

ಅಲ್ಲದೆ ಸ್ಥಳಕ್ಕೆ ಆಗಮಿಸಿದ ಕೃಷಿ ಇಲಾಖೆ ಅಧಿಕಾರಿ H ಸಂತೋಷ ಅಂಗಡಿಯನ್ನು ಪರಿಶೀಲಿಸಿದ್ದು ಅವಧಿ ಮೀರಿದ ಔಷಧಿ ನೀಡಿದ ಹಿನ್ನೆಲೆ ಅಂಗಡಿ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹಾಗೂ ಅಂಗಡಿಯ ಲೈಸೆನ್ಸ್‌ ರದ್ದು ಮಾಡಲು ಮೇಲಾಧಿಕಾರಿಗಳಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು

ವರದಿ ::ರಮೇಶ್ ಸೋಮಕ್ಕನವರ್ ಪಬ್ಲಿಕ್ ನೆಕ್ಸ್ಟ್

Edited By : Somashekar
PublicNext

PublicNext

16/06/2026 11:48 am

Cinque Terre

6.94 K

Cinque Terre

0

ಸಂಬಂಧಿತ ಸುದ್ದಿ