ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ ಗೋಲಿಬಾರ್‌ ಗೆ 19 ವರ್ಷ, ಸಮಸ್ಯೆಗಳು ಜೀವಂತ, ತೀರದ ರೈತರ ಸಂಕಷ್ಟ

ಹಾವೇರಿ ಗೋಲಿಬಾರ್ ನಡೆದು ಇಂದಿಗೆ 19 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಾವೇರಿ ರೈತ ಸಂಘ ರೈತ ಹುತಾತ್ಮ ದಿನಾಚರಣೆ ಆಚರಿಸಿತು. ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿರುವ ರೈತರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಹೋರಾಟ ದಿನ ಆಚರಿಸಿತು. ‌

ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ರೈತರು, ರೈತರ ಹೋರಾಟದ ದಿನದಲ್ಲಿ ಭಾಗವಹಿಸಿದ್ದರು. ಪ್ರತಿವರ್ಷ ಹಾವೇರಿಯಲ್ಲಿ ಜೂನ್ 10 ನ್ನು ರೈತರ ಹುತಾತ್ಮ ದಿನಾಚರಣೆಯಾಗಿ ಆಚರಿಸಲಾಗುತ್ತೆ. ಆದರೆ ಗೋಲಿಬಾರ್‌ ಘಟನೆ ಹತ್ತೊಂಬತ್ತನೇ ವರ್ಷಕ್ಕೆ ಕಾಲಿಟ್ಟರೂ ರೈತರ ಅಂದಿನ ಸಮಸ್ಯೆಗಳು ಇಂದಿಗೂ ಸಮಸ್ಯೆಗಳಾಗಿಯೇ ಉಳಿದಿವೆ. ಹೀಗಾಗಿ ರೈತರು ಈ ಬಾರಿ ಹುತಾತ್ಮ ದಿನಾಚರಣೆಯನ್ನು ರೈತರ ಹೋರಾಟ ದಿನವನ್ನಾಗಿ ಆಚರಿಸಿದರು.

Edited By : Shivu K
PublicNext

PublicNext

10/06/2026 09:50 pm

Cinque Terre

11.14 K

Cinque Terre

0

ಸಂಬಂಧಿತ ಸುದ್ದಿ